ಕಲಬುರಗಿ: ರಂಗಾಯಣ ಆಯೋಜಿಸಿದ್ದ ರಂಗಾಂತರಾಳ ಕಾರ್ಯಕ್ರಮದಲ್ಲಿತಮ್ಮ ರಂಗಾನುಭವಗಳನ್ನು ಹಂಚಿಕೊಂಡಅವರು, ಚಿಕ್ಕಂದಿನಲ್ಲಿ ಬೀದಿ ಬದಿಯಲ್ಲಿಆಡಿ ಬೆಳೆದ ನನಗೆ ಕಾಲೇಜುರಂಗಭೂಮಿಯು ಈ ಕ್ಷೇತ್ರದಲ್ಲಿ ಆಸಕ್ತಿ ವಹಿಸುವಂತೆ ಮಾಡಿತು. ಕ್ರಮೇಣ ಸಮುದಾಯದ ಸಾಂಸ್ಕೃತಿಕ ಜಾಥಾಗಳಲ್ಲಿ ಭಾಗವಹಿಸುವ ಮೂಲಕ ರಂಗದಲ್ಲಿ ಪರಿಶ್ರಮ ಪಡಲು ಸಾಧ್ಯವಾಯಿತು ಎಂದರು.
ರಂಗಭೂಮಿಯಲ್ಲಿ ನಾನು ಕಾರ್ಯನಿರ್ವಹಿಸಿದ್ದು ಕೇವಲ ಮನರಂಜನೆ ನೀಡುವುದಕ್ಕೆಅಲ್ಲ. ಜನಸಾಮಾನ್ಯರ ತಿಳುವಳಿಕೆಯ ವಿಸ್ತಾರ ಹೆಚ್ಚಿಸಲು, ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯನ್ನುಅರ್ಥ ಮಾಡಿಸಲು ರಂಗಚಟುವಟಿಕೆಗಳಲ್ಲಿ ಭಾಗವಹಿಸಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಂಗಸಮಾಜದ ಸದಸ್ಯ ಶ್ರೀಧರ ಹೆಗಡೆ, ಹಿರಿಯ ರಂಗಕರ್ಮಿಗಳ ಅನುಭವಗಳನ್ನು ಇಂದಿನ ಯುವ ರಂಗಕರ್ಮಿಗಳಿಗೆ ತಲುಪಿಸಲು ರಂಗಾಂತರಾಳ ಅತ್ಯುತ್ತಮಕಾರ್ಯಕ್ರವಾಗಿದೆಎಂದರು. ಮುಖ್ಯಅತಿಥಿಯಾಗಿದ್ದ ಗುವಿವಿ ಮಾಜಿ ಸಿಂಡಿಕೇಟ್ ಸದಸ್ಯ ಪ್ರೊ.ಈಶ್ವರ್‌ಇಂಗನ್ ಮಾತನಾಡಿ, ರಂಗದ ಹಿಂದೆದುಡಿದ ರಂಗಕರ್ಮಿಗಳು ತಮ್ಮರಂಗ ನಡೆಯನ್ನುದಾಖಲಿಸಲು ಇದೊಂದುಉತ್ತಮ ವೇದಿಕೆ ಎಂದರು.
ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು, ಆಡಳಿತಾಧಿಕಾರಿ ಜಗದೀಶ್ವರಿ ಅ. ನಾಸಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಹಿಪಾಲರೆಡ್ಡಿ ಮುನ್ನೂರ್ ನಿರೂಪಿಸಿದರು.ಶಂಕ್ರಯ್ಯಆರ್.ಘಂಟಿ ವಂದಿಸಿದರು.
ಡಾ. ಸ್ವಾಮಿರಾವಕುಲಕರ್ಣಿ, ಡಾ.ಕಾಶಿನಾಥ ಅಂಬಲಗಿ, ಡಾ.ಸುಜಾತಾಜಂಗಮಶೆಟ್ಟಿ, ಸಿದ್ಧರಾಮ ಹೊನ್ಕಲ್, ಸುಭಾಸ್‌ಕುಲಕರ್ಣಿ, ಡಾ.ಶ್ರೀನಿವಾಸ ಸಿರನೂರಕರ್, ಡಾ.ಕೆ. ಲಿಂಗಪ್ಪ, ವಿಶ್ವರಾಜ್ ಪಾಟೀಲ, ಸಮೀರ್ ಸುಬೇದಾರ್, ಇತರರು ಭಾಗವಹಿಸಿದ್ದರು.