ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿ ಬುದ್ಧಿ ಹೇಳುವವರು ಪತ್ರಕರ್ತರು: ಶಾಸಕ ರಾಜುಗೌಡ

0
91
ನಗರದ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ತಾಲೂಕು ಕಚೇರಿಗೆ ಭೇಟಿ ನೀಡಿದ ಶಾಸಕ ನರಸಿಂಹ ನಾಯಕ (ರಾಜುಗೌಡ)ಗೆ ಪತ್ರಿಕಾ ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು.ರಾಜಾ ಹನಮಪ್ಪ ನಾಯಕ (ತಾತಾ),ಯೂನಿಯನ್ ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ,ತಾಲೂಕಾಧ್ಯಕ್ಷ ರಾಜು ಕುಂಬಾರ ಇತರರಿದ್ದರು.

ಸುರಪುರ: ನಾವು ಏನೇ ಒಳ್ಳೆಯ ಕೆಲಸ ಮಾಡಿದಾಗ ನಮ್ಮ ಬಗ್ಗೆ ಒಳ್ಳೆಯದನ್ನು ಬರೆದು ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಹುಮ್ಮಸ್ಸು ತುಂಬುವಿರಿ.ಅಲ್ಲದೆ ನಾವು ತಪ್ಪು ಮಾಡಿದಾಗ ಅದನ್ನು ಎತ್ತಿ ತೋರಿಸಿ ಬುದ್ಧಿ ಹೇಳುವವರು ಪತ್ರಕರ್ತರು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ನಗರದ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಪತ್ರಿಕಾ ಭವನ ನಿರ್ಮಾಣಕ್ಕೆ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿ,ಇಂದು ನಿಮ್ಮ ರಾಜುಗೌಡ ಈ ಮಟ್ಟಕ್ಕೆ ಬೆಳೆಯಲು ನಿಮ್ಮಗಳ ಸಹಕಾರವೆ ಮುಖ್ಯವಾಗಿದೆ.ಇದೇ ರೀತಿಯ ಸಹಕಾರ ನಿರಂತರವಾಗಿರಲಿ.ಇಂದು ಕಾರ್ಯಾಲಯಕ್ಕೆ ಕರೆಯಿಸಿ ಸನ್ಮಾನಿಸಿದ್ದು ಸಂತೋಷ ತಂದಿದೆ.ಅದರಂತೆ ತಾವು ಸಲ್ಲಿಸಿದ ಮನವಿಯಂತೆ ಅನೇಕ ವರ್ಷಗಳಿಂದ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣದ ಬೇಡಿಕೆ ಸಲ್ಲಿಸಿರುವಿರಿ.ಪತ್ರಿಕಾ ಭವನದ ಅವಶ್ಯಕತೆಯನ್ನು ನಾನು ಅರಿತಿರುವೆನು.ಶೀಘ್ರದಲ್ಲಿಯೇ ಉತ್ತಮವಾದ ಪತ್ರಿಕಾ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೂನಿಯನ್ ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ ಮಾತನಾಡಿ,ನಗರದಲ್ಲಿ ಯಾರೆ ಪತ್ರಿಕಾಗೋಷ್ಟಿ ನಡೆಸಲು,ಯಾವುದೆ ಸುದ್ದಿಯನ್ನು ನೀಡಲು ಒಂದು ನಿಖರವಾದ ಸ್ಥಳವಿರುವುದು ಅವಶ್ಯವಾಗಿದೆ.ಆದ್ದರಿಂದ ಕೆಜೆಯುನ ಮನವಿಗೆ ಸ್ಪಂಧಿಸಿ ಶೀಘ್ರವೆ ಪತ್ರಿಕಾ ಭವನ ನಿರ್ಮಿಸುವುದಾಗಿ ತಿಳಿಸಿದ ಶಾಸಕರಿಗೆ ಧನ್ಯವಾದ.ಪತ್ರಕರ್ತರಿಗೆ ಇದೇ ರೀತಿಯ ಸಹಕಾರ ನಿರಂತರವಾಗಿರಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ),ಕೆಜೆಯು ಜಿಲ್ಲಾ ಉಪಾಧ್ಯಕ್ಷ ಬಾಲಪ್ಪ ಕುಪ್ಪಿ,ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ ದೊರೆ,ತಾಲೂಕು ಅಧ್ಯಕ್ಷ ರಾಜು ಕುಂಬಾರ,ಉಪಾಧ್ಯಕ್ಷ ಮಲ್ಲುಗುಳಗಿ,ಪ್ರ.ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ ಪತ್ರಕರ್ತರಾದ ಮಲ್ಲಿಕಾರ್ಜುನ ತಳ್ಳಳ್ಳಿ,ಧೀರೇಂದ್ರ ಕುಲಕರ್ಣಿ,ಶ್ರೀಕರ ಜೋಷಿ,ಸೋಮಶೇಖರ ನರಬೋಳಿ,ಕಲೀಂ ಫರೀದಿ,ಮುರಳಿ ಅಂಬುರೆ,ರಾಘವೇಂದ್ರ ಮಾಸ್ತರ್,ಪುರುಷೋತ್ತಮ ನಾಯಕ,ಮಹಾದೇವಪ್ಪ ಬೊಮ್ಮನಹಳ್ಳಿ,ದುರ್ಗಾಪ್ರಸಾದ,ಮದನ ಕಟ್ಟಿಮನಿ, ರಾಘು ದೇಸಾಯಿ ಮುಖಂಡರಾದ ಮಲ್ಲಿಕಾರ್ಜುನ ರಡ್ಡಿ, ಕೃಷ್ಣಾರಡ್ಡಿ ಮುದನೂರ,ಮಲ್ಲು ಹೂಗಾರ,ಪಶುರಾಮ ಹಸನಾಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here