ಕಲಬುರಗಿ: ನೋವೆಲ್ ಕರೋನಾ ವೈರಸ್ ಭೀತಿಯಿಂದ ಕಲಬುರಗಿ ನಗರದ ಔಷಧಿ ಅಂಗಡಿಗಳು ಮತ್ತು ಜನರಲ್ ಸ್ಟೋರ್‌ನವರು ಹೆಚ್ಚಿನ ದರದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಮತ್ತು ಫೇಸ್ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಭಾನುವಾರ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜೀ ಅವರ ನೇತೃತ್ವದ ತಂಡ ನಗರದ ಮೆಡಿಕಲ್, ಜನರಲ್ ಸ್ಟೋರ್‌ಗಳಿಗೆ ದಿಢೀರ ಭೇಟಿ ನೀಡಿ ತಪಾಸಣೆ ಮಾಡಿತು.
ಕಲಬುರಗಿ ನಗರದ ಸೂಪರ್ ಮಾರ್ಕೆಟ್, ಸ್ಟೇಷನ್ ಏರಿಯಾ, ಬಸ್ ನಿಲ್ದಾಣ ಪ್ರದೇಶದ ಸುಮಾರು ೧೦ ಮೆಡಿಕಲ್ ಅಂಗಡಿಗಳಿಗೆ ಭೇಟಿ ನೀಡಿದ ತಂಡ ಹ್ಯಾಂಡ್ ಸ್ಯಾನಿಟೈಜರ್ ಮತ್ತು ಫೇಸ್ ಮಾಸ್ಕ್‌ಗಳನ್ನು ಎಂ.ಆರ್.ಪಿ. ದರದಲ್ಲಿಯೆ ಮಾರಾಟ ಮಾಡಲಾಗುತ್ತಿದಿಯೆ ಎಂಬುದನ್ನು ಪರಿಶೀಲಿಸಿತು. ಕೆ.ಬಿ.ಎನ್. ಕಾಂಪ್ಲೆಕ್ಸ್‌ನಲ್ಲಿರುವ ಟ್ರಸ್ಟ್ ಮತ್ತು ಡ್ರಗ್ಗಿಸ್ಟ್ ಮೆಡಿಕಲ್ ಸ್ಟೋರ್‌ನಲ್ಲಿ ಎಂ.ಆರ್.ಪಿ. ಇಲ್ಲದ ಮಾಸ್ಕ್‌ಗಳನ್ನು ತಪಾಸಣೆ ವೇಳೆ ಕಂಡುಬಂದಿದ್ದರಿಂದ ಸದರಿ ಮೆಡಿಕಲ್ ಸ್ಟೋರ್ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಹಾಯಕ ನಿಯಂತ್ರಕ ರಫೀಕ್ ಲಾಡಜೀ ತಿಳಿಸಿದ್ದಾರೆ.
ಎಂ.ಆರ್.ಪಿ.ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವಂತಿಲ್ಲ ದಿ ಲೀಗಲ್ ಮೆಟ್ರೋಲಾಜಿ (ಪ್ಯಾಕೇಜಡ್ ಕಮೋಡಿಟಿಸ್) ಅಧಿನಿಯಮ-೨೦೧೧ರನ್ವಯ ಪ್ರತಿ ಪ್ಯಾಕೇಜಡ್ ಕಮೋಡಿಟಿಸ್ (ಪೊಟ್ಟಣ ಸಾಮಗ್ರಿ)ಗಳ ಮೇಲೆ ತಯಾರಕರು ಅಥವಾ ಪ್ಯಾಕರ್ ಸಂಸ್ಥೆಯ ಹೆಸರು ಮತ್ತು ವಿಳಾಸ, ಪ್ರಮಾಣ, ಎಂ.ಆರ್.ಪಿ. ದರ, ತಯಾರಿಕೆಯ ವರ್ಷ ಮತ್ತು ಅದರ ಮುಕ್ತಾಯದ ಅವಧಿ ಹಾಗೂ ಪೊಟ್ಟಣದ ಕುರಿತು ದೂರು ನೀಡಲು ಸಹಾಯವಾಣಿ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿರುತ್ತದೆ. ಇದನ್ನು ಉಲ್ಲಂಘಿಸಿದಲ್ಲಿ ಮತ್ತು ಎಂ.ಆರ್.ಪಿ. ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಫೀಕ್ ಲಾಡಜೀ ಅವರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಹ್ಯಾಂಡ್ ಸ್ಯಾನಿಟೈಜರ್, ಫೇಸ್ ಮಾಸ್ಕ್‌ಗಳು ಸೇರಿದಂತೆ ಯಾವುದೇ ಪ್ಯಾಕೇಜಡ್ ಪೊಟ್ಟಣ ಸಾಮಗ್ರಿಗಳು ಎಂ.ಆರ್.ಪಿ. ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ರಫೀಕ್ ಲಾಡಜಿ-9480133856 ಮೋಬೈಲ್ ಸಂಪರ್ಕಿಸಿ ದೂರು ನೀಡಬಹುದಾಗಿದೆ.
ತಪಾಸಣಾ ತಂಡದಲ್ಲಿ ಇಲಾಖೆಯ ನಿರೀಕ್ಷಕರಾದ ಅಮರೇಶ ಹೊಸಮನಿ ಹಾಗೂ ಅಶ್ವಥ್ ಕುಮಾರ್ ಪತ್ತಾರ್ ಇದ್ದರು.