ಕಲಬುರಗಿ: ಪಾದಕ್ಕೆ ಪರುಷ ಸ್ಥಾನ ಕಲ್ಪಿಸಿದ ಬಸವಣ್ಣನವರು ವೇದ, ಉಪನಿಷತ್, ಶಾಸ್ತ್ರಗಳನ್ನು ದಿಕ್ಕರಿಸಿದ ಅವರು ಮನಸಾಕ್ಷಿ ಅನುಗುಣವಾಗಿ ಬದುಕಲು ಕಲಿಸಿದರು ಎಂದು ಬೀದರ್ ನ ಬಸವ ಗಿರಿಯ ಅಕ್ಕ ಅನ್ನಪೂರ್ಣ ತಾಯಿ ನುಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಬಸವ ಸಾಂಸ್ಕೃತಿಕ ಉದ್ಯಾನದ ಆವರಣದಲ್ಲಿ ಆಯೋಜಿಸಿರುವ ಬಸವ ಜಯಂತಿ ಉತ್ಸವ ಕಾರ್ಯಕ್ರಮ ದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಸವಣ್ಣನವರು ಮಾತನಾಡುವ ಅಭಿವ್ಯಕ್ತಿ ಸ್ವಾತಂತ್ರ್ಯ ಕಲಿಸಿದರು. ದೇಹವನ್ನೇ ದೇವಾಲಯ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ದೇವರ ಬಗೆಗಿರುವ ಭಯ ನಿವಾರಿಸಿದರು. ಕಾಯಕ ಜೀವಿಗಳು ಆಗಿದ್ದ ಶರಣರ ಆಚಾರ- ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ವಚನ ಓದುವ, ಲಿಂಗಪೂಜೆಯಲ್ಲಿ ತೊಡಗುವ, ಕಾಯಕ ಮಾಡುವ, ದುಡಿದುಣ್ಣುವ ಮೂಲಕ ಪಂಚಾಂಗ, ಭವಿಷ್ಯಕಾರರಿಂದ ದೂರವಿರಬೇಕು. ಶರಣರ ತಾಕತ್ತು ನಮ್ಮಲ್ಲಿ ಬರಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮೆಹರಾಜ್ ಪಟೇಲ್ ಇದ್ದರು.
ಒಳ್ಳೆಯ ವರದಿ