ಕಲಬುರಗಿ: ಇಲ್ಲಿನ ಕೇಂದ್ರಿಯ ವಿಶ್ವ ವಿದ್ಯಾಲಯದ ಮಾರ್ಚ್ 14 ರಂದು ನಡೆಯಬೇಕಿದ್ದ ೫ ನೇ ಘಟಿಕೋತ್ಸವವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ಕೇಂದ್ರಿಯ ವಿವಿ ತಿಳಿಸಿದೆ.
ಘಟಿಕೋತ್ಸವದಲ್ಲಿ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ಅವರ ಆರೋಗ್ಯದ ಹಿತ ದೃಷ್ಠಿಯಿಂದ, ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯದ ಅನುದಾನ ಆಯೋಗದ (ಯುಜಿಸಿ) ಸಲಹೆಯ ಮೇರೆಗೆ ಕರೋನಾ ವೈರಸ್ (ಕೋವಿಡ್ – ೧೯) ಹರಡುವುದನ್ನು ತಡೆಗಟ್ಟುವ ಕ್ರಮವಾಗಿ ಈ ನಿರ್ಧಾರವನ್ನುತೆಗೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.