ಶಹಾಬಾದ್ ನಗರಸಭೆಗೆ ಕಾಂಗ್ರೆಸ್ ಗೆ ಭರ್ಜರಿ ಗೆಲುವು, ಬಿಜೆಪಿಗೆ ಮುಖಭಂಗ

0
84

ಶಹಾಬಾದ: ರಾಜ್ಯ ಸರ್ಕಾರ ಶಹಾಬಾದ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮನ್ಯ ವರ್ಗಕ್ಕೆ ಬುಧವಾರ ಮೀಸಲಾತಿ ಆದೇಶ ಹೊರಡಿಸಿದ್ದರಿಂದ ಅಧ್ಯಕ್ಷ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಯುವ ಸಾಧ್ಯಯಿದೆ.

ಶಹಾಬಾದ ನಗರಸಭೆಯಲ್ಲಿ ಬಿಜೆಪಿ- ೫, ಜೆಡಿಎಸ್-೦೧, ಪಕ್ಷೇತರ -೩ ,ಕಾಂಗ್ರೆಸ್-೧೮ ಸ್ಥಾನಗಳನ್ನು ಪಡೆದಿದೆ. ಅಲ್ಲದೇ ಪಕ್ಷೇತರದ ಮೂರು ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಖಚಿತ ಎನ್ನಲಾಗಿದೆ.ಹೀಗಾಗಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯುವುದು ಶತಸಿದ್ಧ.

Contact Your\'s Advertisement; 9902492681

ಈಗಾಗಲೇ ಕಾಂಗ್ರೆಸ್‌ನ ನಗರಸಭೆ ಸದಸ್ಯರಲ್ಲಿ ಇಬ್ಬರು ಮಾತ್ರ ಸತತ ಮೂರು ಬಾರಿ ಗೆಲುವು ಕಂಡ ಸಾಮನ್ಯ ವರ್ಗದ ಸೂರ್ಯಕಾಂತ ಕೋಬಾಳ, ಅಲ್ಪಸಂಖ್ಯಾತರ ವರ್ಗದ ಡಾ.ಅಹ್ಮದ್ ಪಟೇಲ್ ಅವರ ನಡುವೆ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಅಲ್ಲದೇ ಹಳೆಶಹಾಬಾದನ ಇನಾಯತಖಾನ ಜಮಾದಾರ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎಂಬುದು ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ತೆರೆಮರೆಯಲ್ಲಿ ಬಾರಿ ಕಸರತ್ತು ಪ್ರಾರಂಭವಾಗಿದೆ.
ನಗರಸಭೆಯ ಚುನಾವಣೆಯ ಫಲಿತಾಂಶ ಸೆ. ೩, ೨೦೧೮ ರಂದು ಹೊರಬೀಳುತ್ತಿದ್ದಂತೆ, ಅಂದೇ ರಾತ್ರಿ ರಾಜ್ಯ ಸರ್ಕಾರ ಶಹಾಬಾದ ನಗರಸಭೆಯ ಅಧ್ಯಕ್ಷ ಸ್ಥಾನ-ಸಾಮನ್ಯ, ಹಾಗೂ ಉಪಾಧ್ಯಕ್ಷ ಸ್ಥಾನ- ಸಾಮನ್ಯ ಮಹಿಳೆಗೆ ಮೀಸಲಾತಿ ಆದೇಶ ನೀಡಿತ್ತು. ಅದಾದ ನಾಲ್ಕು ದಿನಗಳಲ್ಲಿ ಮತ್ತೇ ಮೀಸಲಾತಿ ಬದಲಾವಣೆ ಮಾಡಿ ಕೇವಲ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ(ಎ) ಮೀಸಲಾತಿ ಆದೇಶ ನೀಡಲಾಗಿತ್ತು.ನಂತರ ನ್ಯಾಯಾಲಯದ ತಡೆಯಾಜ್ಞೆಯಿಂದ ಪ್ರಕ್ರಿಯೆ ನಿಂತು ಹೋಗಿತ್ತು.ಈಗ ರಾಜ್ಯ ಸರ್ಕಾರ ಮತ್ತೆ ಮೀಸಲಾತಿ ಆದೇಶ ಪ್ರಕಟ ಮಾಡಿದ ಬೆನ್ನಲೇ ರಾಜಕೀಯ ರಂಗು ಪಡೆದಿರುವುದು ಮಾತ್ರ ಸತ್ಯ.

ಮೂರು ಬಾರಿ ಸತತವಾಗಿ ಗೆಲುವು ಸಾಧಿಸಿದ ಸೂರ್ಯಕಾಂತ ಕೋಬಾಳ, ಡಾ.ಅಹ್ಮದ್ ಪಟೇಲ್ ಈ ಇಬ್ಬರು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಹಾಗೂ ವರಿಷ್ಠರ ವಿಶ್ವಾಸ ಗಳಿಸಿದವರು. ಅಲ್ಲದೇ ಇಬ್ಬರನ್ನು ಯಾವುದರಲ್ಲಿ ತೆಗೆದು ಹಾಕುವಂತಿಲ್ಲ. ಅಲ್ಲದೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಇಲ್ಲದಿರುವುದರಿಂದ ನಗರಸಭೆಯಲ್ಲಿ ಅಧಿಕಾರಿಗಳು ಮಾಡಿದ್ದೇ ಆಟ ಎಂಬಂತಾಗಿತ್ತು. ಸುಮಾರು ಒಂದೂವರೆ ವರ್ಷದಿಂದ ಅಧ್ಯಕ್ಷರಿಲ್ಲದೇ ಸದಸ್ಯರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ಮೀಸಲಾತಿ ಪ್ರಕಟವಾಗಿ ಚುನಾವಣೆ ನಡೆದು, ಬೇಗನೆ ಅಧ್ಯಕ್ಷರು ಆಯ್ಕೆಯಾಗಿ ಅಧಿಕಾರದ ಗದ್ದುಗೆ ಹಿಡಿದರೇ ಸಾರ್ವಜನಿಕರ ಕಾರ್ಯಗಳು ಸುಗಮವಾಗಿ ನಡೆಯುತ್ತವೆ ಎಂಬುದು ಸಾರ್ವಜನಿಕರ ಮಾತಾಗಿದೆ. ಈಗಾಗಲೇ ನಗರದ ಪ್ರಥಮ ಪ್ರಜೆಯಾಗಲು ಇನ್ನಿಲ್ಲದ ಕಸರತ್ತು ಪ್ರಾರಂಭವಾಗಿದ್ದು, ವರಿಷ್ಠರು, ಜಿಲ್ಲಾ ನಾಯಕರು, ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಹೈಕಮಾಂಡ ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here