ಗ್ರಾಹಕರಿಗೆ ಗುಣಮಟ್ಟದ ಸರಕು-ಸೇವೆ ದೊರೆಯಲಿ: ಸಾರಂಗಧರ ಶ್ರೀ

0
32

ಕಲಬುರಗಿ: ರಾಷ್ಟ್ರದ ಮಾರುಕಟ್ಟೆಯ ಆಧಾರಸ್ಥಂಭವಾದ ಗ್ರಾಹಕರು ನಿಗದಿ ಪಡಿಸಿದ ಸೂಕ್ತ ಬೆಲೆಗೆ ಯಾವುದೇ ಸರಕು ಹಾಗೂ ಸೇವೆಗಳನ್ನು ಖರೀದಿಸುತ್ತಾರೆ. ಅವರಿಗೆ ಉತ್ತಮ ಗುಣಮಟ್ಟದ ಸರಕು ಹಾಗೂ ಸೇವೆಗಳನ್ನು ದೊರಯಬೇಕು. ಆಗ ಮಾತ್ರ ಗ್ರಾಹಕ ಮತ್ತು ಉತ್ಪಾದಕ, ಮಾರಾಟಗಾರ ಸುದೀರ್ಘವಾದ ಸಂಬಂಧ ಹೊಂದಲು ಸಾಧ್ಯವಿದೆಯೆಂದು ಶ್ರೀಶೈಲ್ ಸಾರಂಗಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.

ನಗರದ ಆಳಂದ ರಸ್ತೆಯ ರೇಲ್ವೆ ಮೇಲ್ಸೇತುವೆ ಸಮೀಪದಲ್ಲಿ ಸ್ಥಾಪಿಸಲಾಗಿರುವ ’ಬೆಣ್ಣೂರ ಪೆಟ್ರೋಲ್ ಬಂಕ್’ಗೆ ಚಿ.ದೊಡ್ಡಪ್ಪ ಅಪ್ಪಾ ಅವರ ಜೊತೆಗೂಡಿ ಗುರುವಾರ ಚಾಲನೆ ನೀಡಿ ನಂತರ ಮಾತನಾಡುತ್ತಿದ್ದರು.  ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಪೆಟ್ರೋಲ್ ಬಂಕ್‌ಗಳ ಸಂಖ್ಯೆ ಹೆಚ್ಚಾದರೆ ಸಾಲದು. ಜೊತೆಗೆ ಶುದ್ದವಾದ ಪೆಟ್ರೋಲ್, ಗ್ರಾಹಕರ ಹಣಕ್ಕೆ ತಕ್ಕಂತೆ ಗ್ರಾಹಕಮುಖಿ ಸೇವೆ ನೀಡುವ ಕೇಂದ್ರಗಳು ವೃದ್ಧಿಯಾಗಬೇಕಾಗಿದೆಯೆಂದರು.

Contact Your\'s Advertisement; 9902492681

ಬಿಪಿಸಿಎಲ್‌ನ ಮಾರಾಟ ಅಧಿಕಾರಿ ಸೈಯದ್ ಸಾದತ್ ಮಾತನಾಡುತ್ತಾ, ಗುಣಮಟ್ಟ ಮತ್ತು ಪ್ರಮಾಣಕ್ಕೆ ಸಂಬಂಧಿಸಿದಂತೆ ನಮ್ಮ ಸಂಸ್ಥೆ ಎಂದಿಗೂ ಕೂಡಾ ಹಿಂದೆ ಬಿದ್ದಲ್ಲ. ಇದನ್ನು ಸ್ವಂತ ಗ್ರಾಹಕರು ಪರೀಕ್ಷಿಸಿ, ನಿಮಗೆ ತೃಪ್ತಿಯೆನಿಸಿದರೆ ನಮ್ಮ ಜೊತೆ ವ್ಯವಹರಿಸಬಹುದಾಗಿದೆಯೆಂದರು ನುಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ವೀರಭದ್ರ ಶಿವಾಚಾರ್ಯರು, ರಾಜಶೇಖರ ಶಿವಾಚಾರ್ಯರು, ಚಿ.ಪೂಜ್ಯ ದೊಡ್ಡಪ್ಪ ಅಪ್ಪಾ, ಶರಣಬಸಪ್ಪ ಎ.ಬೆಣ್ಣೂರ, ಭೀಮಾಶಂಕರ ಬಿಲಗುಂದಿ, ಪ್ರಸಾದ ರಾಜವಾಡೆ, ಡಾ.ಶಿವಾನಂದ ದೇವರಮನಿ, ಬಸವರಾಜ ಜಿಳ್ಳೆ, ಶರಣಗೌಡ ಮಾಲಿಪಾಟೀಲ, ರಾಜಶೇಖರ, ಸೋಮಶೇಖರ, ಶಂಕರಬಾಬು, ಖಯುಮ್ ಪಟೇಲ್, ಸಿದ್ರಾಮಪ್ಪ ಹರಸೂರ, ಅಣ್ಣಾರಾಯ ಸಣಮನಿ, ಸೂರ್ಯಕಾಂತ ಫುಲಾರಿ, ಡಾ.ಕೆ.ಎಸ್.ಮಾಲಿಪಾಟೀಲ, ಶ್ರೀಶೈಲ್ ಘೂಳಿ, ಕಲ್ಯಾಣಿ ಬಿರಾದಾರ, ಗುಂಡಪ್ಪ ಖೇಡೆಗಾಂವ, ಸಂತೋಷ ಪಾಟೀಲ ದಣ್ಣೂರ, ಮೋಹನಗೌಡ ಪಾಟೀಲ, ಅಣ್ಣಾರಾವ ದುತ್ತರಗಾಂವ, ಸುರೇಶ, ಅಪ್ಪಾರಾವ ಬೆಣ್ಣೂರ, ವಿಶ್ವನಾಥ, ಚಂದ್ರಶೇಖರ, ರಾಜಶೇಖರ, ಜಗನಾಥ, ಸಂಗಮ್ಮ ಎಸ್.ಬೆಣ್ಣೂರ, ಪ್ರೊ.ಎಚ್.ಬಿ.ಪಾಟೀಲ ಸೇರಿದಂತೆ ಅನೇಕರಿದ್ದರು.

ಕಾರ್ಯಕ್ರಮವನ್ನು ಶರಣಯ್ಯ ಸ್ವಾಮಿ ಪ್ರಾರ್ಥಿಸಿದರು. ಚಂದ್ರಕಾಂತ ಬಿರಾದಾರ ಸ್ವಾಗತಿಸಿದರು. ಅರುಣಕುಮಾರ ಪಾಟೀಲ ನಿರೂಪಿಸಿದರು. ಸಂಜೀವ ಪಾಟೀಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here