ಕಲಬುರಗಿ: ಎಲ್ಲೆಡೆ ದ್ವೇಷ-ಅಸೂಹೆ ಹೊಗೆಯಾಡಿ ವಿಕ್ಷಿಪ್ತ ಪರಿಸ್ಥಿಯಲ್ಲಿರುವ ಈ ಹೊತ್ತಿನಲ್ಲಿ ಶಾಂತಿ, ಕರುಣೆ ಸೌಹಾರ್ದತೆ ಬಯಸುವ ಬುದ್ಧನ ತತ್ವ ಸಂದೇಶಗಳ ಪಾಲನೆ ಇಂದಿನ ತುರ್ತಾಗಿದೆ ಎಂದು ಪ್ರೊ. ಕಲ್ಯಾಣರಾವ ಪಾಟೀಲ ಹೇಳಿದರು.
ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಬೌದ್ಧ ಸಾಹಿತ್ಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ದಿನದ ಸೃಜನಶೀಲ ಸಾಹಿತ್ಯ-1 ಗೋಷ್ಠಿ 4 ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘರ್ಷದ ಕಾಲ ತೊರೆದು ಸೌಹಾರ್ದತೆಯ ಕಾಲದಲ್ಲಿ ಕಾಲಿಡಬೇಕಾಗಿದೆ. ಅಂದಾಗ ಮಾತ್ರ ಮನುಷ್ಯತ್ವಕ್ಕೆ, ಮಾನವೀಯತೆಗೆ ಬೆಲೆ ಬರಲು ಸಾಧ್ಯ ಎಂದು ತಿಳಿಸಿದರು.
ಗದಗನ ಡಾ. ಅರ್ಜುನ ಗೊಳಸಂಗಿ ಬುದ್ಧನನ್ನು ಕುರಿತ ಕನ್ನಡ ಕಾದಂಬರಿಗಳು, ಶಹಾಪುರದ ಬುದ್ಧಘೋಷ ದೇವಿಂದ್ರ ಹೆಗ್ಗಡೆ ಬುದ್ಧನನ್ನು ಕುರಿತ ಕನ್ನಡ ಕಾವ್ಯಗಳು, ಕಲಬುರಗಿಯ ಡಾ. ಅಮೃತಾ ಕಟಕೆ ಬುದ್ದನನ್ನು ಕುರಿತ ಕನ್ನಡ ನಾಟಕಗಳು ವಿಷಯ ಕುರಿತು ತಮ್ಮ ಪ್ರಬಂಧ ಮಂಡಿಸಿದರು.