ಬಸವಣ್ಣನ ಭಾವಚಿತ್ರದ ಅರ್ಥಪೂರ್ಣ ಮೆರವಣಿಗೆಗೆ ತೀರ್ಮಾನ

0
123

ಕಲಬುರಗಿ: ವಿಶ್ವಗುರು ಬಸವಣ್ಣನವರ 886ನೇ ಜಯಂತಿ ಉತ್ಸವದ ನಿಮಿತ್ತ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಬಸವಪರ ಸಂಘಟನೆಗಳ ವತಿಯಿಂದ ನಗರದ ಬಸವೇಶ್ವರ ವೃತ್ತದ ಬಸವ ಉದ್ಯಾನದ ಆವರಣದಲ್ಲಿ ಕಳೆದ 8ರಿಂದ ಆರಂಭವಾಗಿರುವ ಉಪನ್ಯಾಸ ಕಾರ್ಯಕ್ರಮ ಈ ದಿನ ಮೂರನೇ ದಿನಕ್ಕೆ ಕಾಲಿರಿಸಲಿದೆ.

ಮೇ 12ರಂದು ಈ ಕಾರ್ಯಕ್ರಮ ಗಳು ಕೊನೆಗೊಳ್ಳಲಿದ್ದು, ಆ ದಿನ ಸಂಜೆ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಅದ್ದೂರಿಯ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.

Contact Your\'s Advertisement; 9902492681

ನಿನ್ನೆ ರಾತ್ರಿ ಬೀದರ್ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ‌ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ರಾಜ್ಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಬದಿ, ಆರ್.ಜಿ. ಶೆಟಕಾರ, ಅಶೋಕ ಘೂಳಿ, ಸಿದ್ಧರಾಮ ಯಳವಂತಗಿ, ಬಸವರಾಜ ಮೊರಬದ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಬಿ.ಎಂ. ಪಾಟೀಲ ಕಲ್ಲೂರ, ಮಹಾಂತೇಶ ಕಲ್ಬುರ್ಗಿ ಅಯ್ಯನಗೌಡ ಪಾಟೀಲ ಇತರರು ಭಾಗಿಯಾಗಿದ್ದರು.

ಅಬ್ಬರದ ಮೆರವಣಿಗೆಗಿಂತ ಅರ್ಥಪೂರ್ಣ ಮೆರವಣಿಗೆ ಆಚರಿಸಲು ಸಮ್ಮತಿ ವ್ಯಕ್ತಪಡಿಸಿದರು.‌ನಗರೇಶ್ವರ ಶಾಲೆಯಿಂದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿವರೆಗೆ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು. ವಚನ ನೃತ್ಯ, ಶಹಾಬಾದ್ ನ ಬಸವ ಬಜನೆ ಮಂಡಳಿ, ವಚನದ ಹಾಡುಗಳನ್ನು ಹಾಕಿ, ಅಲ್ಲಲ್ಲಿ ಬಸವ ಪುಷ್ಪವೃಷ್ಟಿ ಗೈದು, ಪಥ ಸಂಚಲನ ನಡೆಸಲು ಸಭೆ ಒಪ್ಪಿಗೆ ಸೂಚಿಸಿತು.

ಮಹಿಳೆಯರು, ಮಕ್ಕಳು ಸೇರಿದಂತೆ ಹೆಚ್ಷಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು, ವಿವಿಧ ತಾಲೂಕಿನ ಬಸವಾನುಯಾಯಿಗಳನ್ನು ಮೆರವಣಿಗೆಗೆ ಕರೆ ತರಲು ವಿನಂತಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here