ಕಲಬುರಗಿ: ಸುಪ್ರೀಂ ಕೋರ್ಟ್ ಬಡ್ತಿ ಮೀಸಲಾತಿ ಕಾಯ್ದೆಯನ್ನು ಎತ್ತಿ ಹಿಡಿದ ಪ್ರಕರಣಕ್ಕೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆದೇಶ ಸ್ವಾಗತಿಸಿದ್ದಾರೆ.
ಆದೇಶದ ಪ್ರತಿಯನ್ನು ಪರಾಮರ್ಶಿಸಿ ಅನುಷ್ಠಾನಕ್ಕೆ ತರಲಾಗುವುದು, ಇದರಿಂದ ಸಾವಿರಾರು ಎಸ್ಸಿ. ಎಸ್ಟಿ ನೌಕರರಿಗೆ ಆಗಿದ್ದ ಅನ್ಯಾಯ ತಡೆದಂತಾಗುತ್ತದೆ ಇತರೇ ಸಮಾಜದ ಅಧಿಕಾರಿಗಳಿಗೆ ಬಡ್ತಿಯಲ್ಲಿ ಯಾವುದೇ ಅನ್ಯಾಯ ಆಗದಂತೆ ಸೂಕ್ತ ದಾರಿ ಹುಡುಕಲಾಗುವುದು ಎಂದರು.
ಈಗಾಗಲೇ ಬಡ್ತಿ ಪಡೆದವರಿಗೆ ಹಿಂಬಡ್ತಿ ನೀಡಲಾಗುವುದಿಲ್ಲ ಅವರಿಗೇ ಅದೇ ಹುದ್ದೆ ಸಿಗಲಿಕ್ಕಿಲ್ಲ ಅದೇ ಗ್ರೇಡ್ ನಲ್ಲಿ ಮುಂದುವರೆಸಲಾಗುವುದು ಎಂದು ತಿಳಿಸಿ, ಇತರೇ ಸಮಾಜದ ಅಧಿಕಾರಿಗಳಿಗೆ ಅನ್ಯಾಯ ಆಗುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಧ್ಯೇಯ ನಮ್ಮದಾಗದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿಂಚೋಳಿಯ ಕೊಂಚಾವರಂನಲ್ಲಿ ಹೇಳಿದರು.