ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಯಾಕಪುರ ಗ್ರಾಮದ 8 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ವೇಸಗಿ ಕೊಲೆ ಮಾಡಿರುವ ಆರೋಪಿಗೆ ಇಲ್ಲಿನ ಫೋಕ್ಸೋ ಕಾಯ್ದೆ ಅಡಿಯಲ್ಲಿ 2ನೇ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಸುಲೆಪೇಟ್ ಗ್ರಾಮದ ನಿವಾಸಿಯಾಗಿರುವ ಯಲ್ಲಪ್ಪ ಮಹಾದೇವಪ್ಪ ಮರಣದಂಡನೆ ಗುರಿಯಾದ ಅಪರಾಧಿ, 2019 ಡಿಸೆಂಬರ್ ರಲ್ಲಿ ಅಂಗನವಾಡಿಯಲ್ಲಿ ಓದುತಿದ್ದ 8 ವರ್ಷದ ಬಾಲಕಿ ಅಂಗಡಿಗೆ ಕರೆದುಕೊಂಡು ಹೋಗಿ ಅಂಗಡಿಯಿಂದ ಕುರುಕುರೆ ಕೊಡಿಸಿ ನಂಬಿಸಿ ಯಾಕಾಪುರ ಗ್ರಾಮದ ಅಂಗನವಾಡಿ ಶಾಲೆಯ ಹಿಂದುಗಡೆಯ ಕೆನಾಲ್ ಹತ್ತಿರ ಲೈಂಗಿಕ ದೌರ್ಜನ್ಯವೆಸಗಿ. ನಂತರ ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಸಾಕ್ಷಿ ನಾಶ ಮಾಡಲು ಯತ್ನಿಸಿದ್ದಾನೆ ಎಂಬುದು ಸಾಬೀತಾಗಿದೆ.
ಪ್ರಕರಣದ ತನಿಖೆ ನಡರಸಿದ ಶಂಕರ ಗೌಡವಿ ಪಾಟೀಲ, ಪೋಕ್ರೋ ಕಾಯ್ದೆ ಅಡಿಯಲ್ಲಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2ನೇ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ಗೋಪಾಲಪ್ಪ, ಆರೋಪಿಗೆ ಭಾ.ದಂ.ಸಂ. ಕಲಂ 302 ಮತ್ತು ಕಲಂ.6 ಪೋಸ್ಕೋ ಕಾಯ್ದೆ ಓದಿ ಭಾ.ದಂ.ಸಂ. ಕಲಂ.376(2)(ಎನ್) ಅಪರಾಧಕ್ಕೆ ಮರಣದಂಡನೆ ಶಿಕ್ಷೆ ವಿಧಿಸಿ, ಕಲಂ: 366(ಎ) ಐಪಿಸಿ ಅಡಿಯಲ್ಲಿನ ಅಪರಾಧಕ್ಕೆ 10 ವರ್ಷ ಜೈಲು ಶಿಕ್ಷೆ & ರೂ.50 ಸಾವಿರ ದಂಡ, ಹಾಗೂ ಭಾ.ದಂ.ಸಂ. ಕಲಂ: 201 ರ ಅಪರಾಧಕ್ಕೆ 7 ವರ್ಷ ಕಠಿಣ ಶಿಕ್ಷೆ ಮತ್ತು ರೂ, 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ (ಮೋಕ್ಟೋ)ಎಲ್.ವಿ.ಚಟ್ಟಾಳಕರ, ಇವರು ಪ್ರಕರಣದಲ್ಲಿ ವಾದ ಮಂಡಿಸಿದ್ದರು.