ರೈತರ ಸಾಲಮನ್ನಾ ಯೋಜನೆ: 7 ದಿನದೊಳಗೆ ದಾಖಲಾತಿ ಸಲ್ಲಿಕೆಗೆ ಸೂಚನೆ

0
94

ಕಲಬುರಗಿ: ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ/ಸಹಕಾರ ಬ್ಯಾಂಕುಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು ೧೦.೦೭.೨೦೧೮ ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ಗರಿಷ್ಠ ರೂ. ೧ ಲಕ್ಷದವರೆಗಿನ ಸಾಲ ಸೌಲಭ್ಯ ಪಡೆಯಬೇಕಾದ್ದಲ್ಲಿ ಏಳು ದಿನದೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕೆಂದು ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗೋಪಾಲ ಚೌವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ೨೦೧೮ರ ಈ ಸಾಲಮನ್ನಾ ಯೋಜನೆಯನ್ನು ನಮೂನೆ ೫೨ರ ಹೊಸ ತಂತ್ರಾಂಶದಲ್ಲಿ ಸಂಘವಾರು ಮಾಹಿತಿಯನ್ನು ಅಳವಡಿಸಿ, ಅರ್ಹ ಫಲಾನುಭವಿಗಳಿಗೆ ಹಂತ ಹಂತವಾಗಿ ಸಾಲಮನ್ನಾ ಯೋಜನೆ ಜಾರಿಗೊಳಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಬರುವ ಕೆಲವು ರೈತ ಸಾಲ ಬಾಕಿದಾರರು ಸಾಲಮನ್ನಾ ಯೋಜನೆ ಕುರಿತು ಹೊರಡಿಸಿರುವ ಸರ್ಕಾರಿ ಸುತ್ತೋಲೆಯ ಪ್ರಕಾರ ಪ್ರತಿ ರೈತರ ಆಧಾರ ಕಾರ್ಡ್, ರೇಷನ್ ಕಾರ್ಡ್, ಜಮೀನು ಹಾಗೂ ಸ್ವಯಂ ಧೃಢೀಕರಣ ಪತ್ರ ಪಡೆದು ತಂತ್ರಾಂಶದಲ್ಲಿ ಅಳವಡಿಸಬೇಕಾಗಿದೆ. ಸಾಲ ಬಾಕಿ ಇರುವ ರೈತರು ಮೇಲೆ ತಿಳಿಸಿರುವ ದಾಖಲಾತಿಗಳನ್ನು ಏಳು ದಿವಸದೊಳಗಾಗಿ ಸಂಘಕ್ಕೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಸಾಲಮನ್ನಾ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Contact Your\'s Advertisement; 9902492681

ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸಂಘದ ಕಾರ್ಯಕ್ಷೇತ್ರದಲ್ಲಿ ಇರುವ ಸಾಲಗಾರರನ್ನು ಖುದ್ದು ಸಂಪರ್ಕಿಸಿ, ಸಾಲಮನ್ನಾ ಯೋಜನೆ-೨೦೧೮ ಅನುಷ್ಠಾನ ಅಂತಿಮಗೊಳಿಸಲು ಬೇಕಾದ ದಾಖಲಾತಿಗಳನ್ನು ಪಡೆದು ತಂತ್ರಾಂಶದಲ್ಲಿ ಅಳವಡಿಸಿ, ಅರ್ಹ ರೈತರನ್ನು ಗುರುತಿಸುವಂತೆ ಮಾನ್ಯ ನಿಬಂಧಕರು ಸಹಕಾರ ಸಂಘಗಳು, ಬೆಂಗಳೂರು ಇವರ ಸುತ್ತೋಲೆ ಸಂಖ್ಯೆ ಸಿಆರಡಿ/ಸಿಎಬಿ-೧/೩೩/೨೦೧೮-೧೯, ೧೨-೦೩-೨೦೨೦ ರಲ್ಲಿ ೧೦ ಅಂಶಗಳಿಗೆ ಸಂಬಂಧಿಸಿದಂತೆ, ಅರ್ಹ ರೈತರನ್ನು ಗುರುತಿಸುವ ಸಲುವಾಗಿ ನಿರ್ದೇಶನ ನೀಡಿರುತ್ತಾರೆ. ಹಾಗಾಗಿ ಮಾಹಿತಿ ಪೂರೈಸದೇ ಇದ್ದಲ್ಲಿ ಅಂತಹ ರೈತರು ವೈಯುಕ್ತಿಕ ಜವಾಬ್ದಾರಿಗೆ ಒಳಪಟ್ಟು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಾಲಮನ್ನಾ ಸೌಲಭ್ಯ ತಿರಸ್ಕರಿಸಿ, ತಂತ್ರಾಂಶದಲ್ಲಿ ಸಾಲಮನ್ನಾ-೨೦೧೮ ಅನುಷ್ಠ್ಟಾನ ಅಂತಿಮ ಗೊಳಿಸುತ್ತಾರೆ ಎಂದು ತಿಳಿಸಿದ್ದಾರೆ.
****

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here