ಸುರಪುರ: ನಗರದ ಎಲ್ಲಾ ವಾರ್ಡುಗಳಲ್ಲಿ ನಿರ್ಮಿಸಿರುವ ಹಾಗು ಇನ್ನು ನಿರ್ಮಾಣ ಹಂತದಲ್ಲಿರುವ ಮನೆ ಮನೆ ಶೌಚಾಲಯ ಕಾಮಗಾರಿ ಸಂಪೂರ್ಣ ಕಳಪೆಯಾಗಿವೆ.ಶೌಚಾಳಯ ನಿರ್ಮಾಣಕ್ಕೆ ಸರಕಾರ ಸುಮಾರು ೧೫ ರಿಂದ ೧೮ ಸಾವಿರ ರೂಪಾಯಿಗಳು ನೀಡುತ್ತದೆ.ಆದರೆ ಕೇವಲ ಆರೆಂಟು ಸಾವಿರ ರೂಪಾಯಿಗಳಲ್ಲಿ ಶೌಚಾಲಯ ನಿರ್ಮಿಸಿ ಹಣ ದುರುಪಯೋಗ ಮಾಡಲಾಗಿದೆ.ಆದ್ದರಿಂದ ಶೌಚಾಲಯಗಳ ನಿರ್ಮಾಣ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಯುವ ಮಾನವ ಹಕ್ಕುಗಳ ಹೋರಾಟ ಸಮಿತಿ ಸಂಚಾಲಕ ಭೀಮಣ್ಣ ಗುಡಾಳಕೇರಿ ಆರೋಪಿಸಿದ್ದಾರೆ.
ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು,ಕಾಮಗಾರಿ ನಿರ್ಮಿಸುತ್ತಿರುವ ಗುತ್ತಿಗೆದಾರರೊಂದಿಗೆ ಸೇರಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ.ಇದರಿಂದ ಸರಕಾರದ ಹಣ ಪೋಲಾಗುತ್ತಿದೆ.ಆದರೆ ಕಟ್ಟಿದ ಶೌಚಾಲಂiiಗಳು ಸಾರ್ವಜನಿಕರ ಉಪಯೋಗಕ್ಕೆ ಬರುವುದಿಲ್ಲ. ಜಿಲ್ಲಾಧಿಕಾರಿಗಳಾದ ತಾವು ಖುದ್ದಾಗಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು.ಇಲ್ಲವಾದಲ್ಲಿ ನಮ್ಮ ಸಮಿತಿಯಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಆಗ್ರಹಿಸಿದ್ದಾರೆ.