ಕಲಬುರಗಿ: ಕಲಬುರಗಿ ಕೊರೋನಾ ಸೋಂಕು ಹೊಂದಿದ್ದ ಎರಡನೇ ರೋಗಿ ಡಾಕ್ಟರ್ ಆಗಿರುವುದು ದೃಢಪಟ್ಟ ಹಿನ್ನೆಲೆ ಇಂದು ವೈದ್ಯಾಧಿಕಾರಿ ನಿವಾಸದ ಸುತ್ತಮುತ್ತ 300 ಮೀ. ಇಲಾಖೆ ಕಟ್ಟೆಚ್ಚರ ವಹಿಸಿ ನಿಷೇದಾಜ್ಞೆ ಹೇರಲಾಗಿದೆ.
76 ವಯಸ್ಸಿನ ಕೋವಿಡ್-19 ವೈರಸ್ ನಿಂದ ಮೃತಪಟ್ಟ ನಂತರ ಇಲಾಖೆ ಪ್ರತಿಯೊಂದು ವ್ಯಕ್ತಿ ಮಾಹಿತಿ ಕಲೆ ಹಾಕುತಿದ್ದು, ಈ ವೇಳೆಯಲ್ಲಿ ಕುಟುಂಬಸ್ಥರಲ್ಲಿ ಒಬ್ಬರಾದ 45 ವರ್ಷದ ವ್ಯಕ್ತಿಯಲ್ಲಿ ವೈರಸ್ ಪತ್ತೆಯಾಗಿದ್ದು, ಇದರ ಬೆನ್ನಲ್ಲೆ ಮೃತರಿಗೆ ಚಿಕಿತ್ಸೆ ನೀಡಿದ 63 ವರ್ಷದ ವೈದ್ಯನಿಗೂ ಈ ವೈರಸ್ ತಗಲಿರುವುದು ಇಂದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ಸ್ಪಷ್ಟಪಡಿಸಿದ್ದಾರೆ.
ವೈರಸ್ ಹೊಂದಿದ ಮೃತ ವ್ಯಕ್ತಿಯೊಂದಿಗೆ ಕುಟುಂಬಸ್ಥರೊಬ್ಬರು ಮತ್ತು ಎರಡನೆಯದಾಗಿ ವೈದ್ಯರೊಬ್ಬರು ನೇರ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ.
ಕಲಬುರಗಿಯಲ್ಲಿ ಡಿ.ಸಿ. ಶರತ್ ಬಿ ಮಾತನಾಡಿ, ಯದುಲ್ಲಾ ಕಾಲೋನಿ ನಿವಾಸಿಗಿರುವ ನಿವೃತ್ತ ಸರಕಾರ ವೈದ್ಯರಾದ ಫಹೀಮುದ್ದೀನ್, ಕೆಲವು ದಿನಗಳವರೆಗೆ ವೈದ್ಯರು ಮನೆ-ಪ್ರತ್ಯೇಕತೆಯಲ್ಲಿ ಇರಿಸಿ ಆರಂಭದಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದ್ದು. ಸದ್ಯ ಇಂದು ಐಸೋಲೇಶನ್ ವಾರ್ಡ್ ಗೆ ಶಿಫ್ಟ್ ಮಾಡಿ ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೋಂಕು ಹೊಂದಿದ ವೈದ್ಯನ ಬಡಾವಣೆಗೆ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ನಡೆಸಿ ನಿಷೇದಾಜ್ಞೆ ಹೊರಡಿಸಿದ್ದಾರೆ. ನಿವಾಸಿಗಳಿಗೂ ಪರೀಕ್ಷೆಗೆ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.