Tuesday, July 16, 2024
ಮನೆಬಿಸಿ ಬಿಸಿ ಸುದ್ದಿಸೋಮಶೇಖರ ಚಿನಮಳ್ಳಿ ರಚಿಸಿದ ಲಿಂಗ ಸಂದೇಶ  ಗ್ರಂಥ ಜನಾರ್ಪಣೆ

ಸೋಮಶೇಖರ ಚಿನಮಳ್ಳಿ ರಚಿಸಿದ ಲಿಂಗ ಸಂದೇಶ  ಗ್ರಂಥ ಜನಾರ್ಪಣೆ

ಕಲಬುರಗಿ: ಸಂಸಾರ ಮೋಕ್ಷಕ್ಕೆ ಅಡ್ಡಿ ಎಂದು ಎಲ್ಲ ಧರ್ಮಗಳು ಹೇಳಿದರೆ, ಕುಟುಂಬ ವ್ಯವಸ್ಥೆ ಕಲ್ಪಿಸಿದವರು ಬಸವಾದಿ ಶರಣರು ಎಂದು ಶರಣ ಸಂತೋಷ ಹೂಗಾರ ಅಭಿಪ್ರಾಯಪಟ್ಟರು.

ನಗರದ ಅಪ್ಪ ಗಾರ್ಡನ್ ಪಕ್ಕದ ಜನತಾ ಲೇಔಟ್ ನ ಸಿದ್ಧಾರೂಢ ಮಠದ ಬಳಿ ಇರುವ ಹೋಟೆಲ್ ಪೂರ್ಣಾನಂದ ಪ್ಯಾರಡೈಸ್ ನಲ್ಲಿ ಹಮ್ಮಿಕೊಂಡ ಶರಣ ಸೋಮಶೇಖರ ಚಿನಮಳ್ಳಿ ಬರೆದ ಲಿಂಗ ಸಂದೇಶ ಗ್ರಂಥ ಜನಾರ್ಪಣೆ ಹಾಗೂ ಶರಣ ಸಂಗಮ ಕಾರ್ಯಕ್ರಮದಲ್ಲಿ ಶರಣರ ದೃಷ್ಟಿಯಲ್ಲಿ ದಾಂಪತ್ಯ ಜೀವನ ವಿಷಯ ಕುರಿತು ಮಾತನಾಡಿದ ಅವರು, ಹೆಣ್ಣು, ಹೊನ್ನು, ಮಣ್ಣು ಬದುಕಿಗೆ ಅಡ್ಡಿಯಾಗುವುದಿಲ್ಲ.

ಸಂಸಾರದಲ್ಲಿದ್ದು ಸಾಧನೆ ಮಾಡಬೇಕು ಎಂದು ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಹೇಳುತ್ತಾರೆ ಎಂದು ಹೇಳಿದರು. ಸಾತ್ವಿಕ ಮಾರ್ಗ ದಲ್ಲಿ ಸಂಸಾರ ಸಾಗಿಸಬೇಕು ಎಂದು ಹೇಳಿದ ಶರಣರು ಪ್ರಕೃತಿ ಸಹಜ ಪಂಚೇಂದ್ರೀಯಗಳ ನಿಗ್ರಹ ಸರಿಯಲ್ಲ ಎಂದು ಬಸವಣ್ಣನವರು ಅಂದೇ ತಿಳಿಸಿದ್ದಾರೆ ಎಂದು ತಿಳಿಸಿದರು.

ವಚನ ಸಾಹಿತ್ಯದ ಆಧಾರದಲ್ಲಿ ಸಂಸಾರವೆಂಬ ಶರಧಿ ದಾಟಬೇಕು. ಉಂಡು ಉಪವಾಸಿಯಾಗಬೇಕು ಬಳಸಿ ಬ್ರಹ್ಮಚಾರಿಯಾಗಬೇಕು ಎಂದು ಶರಣರು ಮಾರ್ಗದರ್ಶನ ಮಾಡಿದ್ದಾರೆ ಎಂದರು. ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪದು ಎನ್ನುವಂತೆ ದಾಂಪತ್ಯ ಜೀವನ ನಡೆಸಬೇಕು ಎಂದರು. ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶಿವಶರಣರಪ್ಪ ಕಲಬುರಗಿ ವಹಿಸಿದ್ದರು. ಬಸವ ಸಮಿತಿ ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಸೋಮಶೇಖರ ಚಿನಮಳ್ಳಿ ದಂಪತಿ ವೇದಿಕೆಯಲ್ಲಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ರವೀಂದ್ರ ಶಾಬಾದಿ, ಶರಣೆ ನಳಿನಿ ಮಹಾಗಾಂವಕರ ವೇದಿಕೆಯಲ್ಲಿದ್ದರು. ಗ್ರಂಥ ಕುರಿತು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಕುಪೇಂದ್ರ ಪಾಟೀಲ ಮಾತನಾಡಿದರು. ಅನಿಲಕುಮಾರ ಚಿನಮಳ್ಳಿ ಸ್ವಾಗತಿಸಿದರು. ಮಲ್ಲಣ್ಣ ನಾಗರಾಳ ನಿರೂಪಿಸಿದರು.

ಡಾ. ಕರಣಕುಮಾರ ಚಿನಮಳ್ಳಿ ಶರಣು ಸಮರ್ಪಣೆ ಮಾಡಿದರು. ಸೋಮಣ್ಣ ನಡಕಟ್ಟಿ, ಬಸವರಾಜ ದೂಳಾಗುಂಡಿ, ಚಂದ್ರಶೇಖರ ಮುಗುಳಿ ಇತರರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular