ಕಲಬುರಗಿ: ಪರೀಕ್ಷೆ ಗೆ ತಡವಾಗಿ ಬರುವ ವಿದ್ಯಾರ್ಥಿಗಳು ರಾಷ್ಟ್ರ ಗೀತೆಯನ್ನು ಕೆಳುತ್ತಲೆ ಎದ್ದು ನಿಂತು ಗೌರವ ಸೂಚಿಸುವುದರ ಮೂಲಕ ರಾಷ್ಟ್ರದ ಬಗೆಗಿನ ಗೌರವ ಸಾಬಿತುಪಡೆಸಿದರು.
ಇಲ್ಲಿನ ಎಸ್.ಬಿ.ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಗುವಿಕ ದ 2,4,6ನೆ ಸೆಮಿಸ್ಟರ್ ಪರೀಕ್ಷೆ ವೆಳೆ ಪಕ್ಕದ ಶರಣಬಸವ ಇಂಜಿನಿಯರಿಂಗ ಕಾಲೆಜಿನಲ್ಲಿ ರಾಷ್ಟ್ರಗೀತೆ ಪ್ರಾರಂಬಿಸಿದಂತೆಯೆ ಎಲ್ಲಾ ಪರೀಕ್ಷಾರ್ಥಿಗಳು ಬರೆಯುವುದನ್ನು ನಿಲ್ಲಿಸಿ ಎದ್ದು ನಿಂತು ಗೌರವ ಸೂಚಿಸಿದರು.
ಕೋಣೆ ಮೇಲ್ವಚಾರಕರು, ಆಂತರಿಕ ಪರೀಕ್ಷೆ ಮುಖ್ಯಸ್ಥ ಪ್ರೊ.ಎಸ್.ಎಸ್.ಪಾಟೀಲ, ಬಾಹ್ಯ ಹಿರಿಯ ಮೇಲ್ವಿಚಾರಕ ಡಾ.ಮಹೇಶ ಗಂವ್ಹಾರ ,ಪ್ರಾಚಾರ್ಯ, ಪ್ರೋ.ಎನ್.ಎಸ್.ಪಾಟೀಲ ಹಾಗೂ ಪ್ರೋ.ದಯಾನಂದ ಹೋಡೆಲ್ ವಿದ್ಯಾರ್ಥಿಗಳ ದೇಶ ಭಕ್ತಿಯನ್ನು ಕಂಡು ಮೆಚ್ಚುಗೆ ಸಂತಸ ವ್ಯಕ್ತಪಡಿಸಿದರು.