ಪ್ರಧಾನಿ ಕರೆಗೆ ಸಹಕರಿಸಲು ಶಾಸಕ ಗುತ್ತೇದಾರ ಮನವಿ

0
77

ಆಳಂದ: ಜಗತ್ತನ್ನು ಕಾಡುತ್ತಿರುವ ಭಯಾನಕ ಕರೋನಾ ವೈರಸನಿಂದ ಮುಕ್ತಿ ಪಡೆಯಲು ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಕರೆ ನೀಡಿರುವ ಜನತಾ ಕರ್ಫ್ಯೂಗೆ ಜನತೆ ಸಹಕರಿಸಬೇಕೆಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಮನವಿ ಮಾಡಿದ್ದಾರೆ.

ಸ್ವಯಂಪ್ರೇರಿತರಾಗಿ ನಮ್ಮಿಂದ ನಾವೇ ಕರ್ಫ್ಯೂ ವಿಧಿಸಿಕೊಂಡು 14 ಗಂಟೆಗಳ ಕಾಲ ಮನೆಯಲ್ಲಿದ್ದರೆ ವೈರಸ್ ತನ್ನಿಂದ ತಾನೇ ಸತ್ತು ಹೋಗುವ ಸಾಧ್ಯತೆ ಇರುವುದರಿಂದ ಪ್ರಧಾನಿಗಳು ಈ ಕರೆ ನೀಡಿದ್ದಾರೆ. ರವಿವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮನೆಯಿಂದ ಹೊರಗಡೆ ಬರದೇ ಮನೆಯಲ್ಲೇ ಇದ್ದುಕೊಂಡು ಕರೋನಾ ವೈರಸ್ ಮುಕ್ತ ಭಾರತ ಮಾಡಲು ಸಹಕರಿಸೋಣ ಎಂದು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here