ಆಳಂದ: ಕರೋನಾ ವೈರಸನಿಂದ ರಕ್ಷಿಸಿಕೊಳ್ಳಲು ಕಲಬುರಗಿ ಜಿಲ್ಲಾದ್ಯಂತ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಧಿಕಾರಿ ಶರತ್ ಬಿ ಅವರ ಕಾರ್ಯವೈಖರಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಗಲಿರುಳು ಎನ್ನದೇ ತಂಡವನ್ನು ಕಟ್ಟಿಕೊಂಡು ಸ್ವತ: ಮುನ್ನೆಲೆಗೆ ನಿಂತು ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಗಳ ಕ್ರಮ ಅತ್ಯಂತ ಶ್ಲಾಘನಿಯವಾಗಿದೆ ಜಿಲ್ಲೆಯ ಜನತೆಯು ಕೂಡಾ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿಗಳ ಜೊತೆ ಸಹಕರಿಸುವುದು ಅಗತ್ಯವಾಗಿದೆ ಎಂದಿದ್ದಾರೆ.