ಕಲಬುರಗಿ: ಕೊರೋನಾ ವೈರಸ್ ತಡೆಗಟ್ಟಲು ರಾಜ್ಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಿದ್ದು, ಕೂಲಿ ಕಾರ್ಮಿಕರ ಮತ್ತು ಬಡವರ್ಗಗಳ ಜೀವನ ನಿರ್ವಹಣೆ ಅನುಕೂಲಕಾಗಿ ಫಿರದೋಸ್ ನಗರ ವೇಲ್ಫರ್ ಸೂಸೈಟಿವತಿಯಿಂದ ಆಹಾರ ಧಾನ್ಯ ವಿತರಣೆ ಮಾಡಲಾಯಿತು.
ನಗರದ ಫಿರದೋಸ್ ಬಡಾವಣೆಯ ಕಚೇರಿಯಲ್ಲಿ ಧಾನ್ಯ ವಿತರಿಸಿ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 8 ದಿನಗಳಿಂದ ವ್ಯಾಪಾರ, ವ್ಯವಹಾರ ಸ್ತಬ್ಧವಾಗಿದ್ದು, ಬಡ ಮತ್ತು ಕೂಲಿಕಾರರ ಜೀವನ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಸಂಸ್ಥೆಯಿಂದ ನೆರವಾಗುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಇದ್ದಾಗಿದೆ ಎಂದು ಈ ಸಂದರ್ಭದಲ್ಲಿ ಳಿಸಿದರು.
ಈ ವೇಳೆಯಲ್ಲಿ ಮಝಾರ್ ಆಲಂ ಖಾನ್, ವಾಹೇದ್ ಅಲಿ ಫಾತೇಕಾನಿ, ಸಾದೀಕ್ ಅಲಿ ಫಾತೇಕಾನಿ, ಶೌಕತ್ ಅಲಿ ಖಾನ್, ಅಬ್ದುಲ್ ನೀಸಾರ್ ಖಾನ್, ಜೈದುಲ್ ಇಸ್ಲಾಂ, ಸರಕಾರಿ ನಿವೃತ್ತಿ ನೌಕರರಾದ ಚಾಂದ್ ಸಾವ್, ಅಬ್ದುಲ್ ರಜಾಕ್, ಅಬ್ದುಲ್ ಮಜಿದ್ ವಕಿಲ್, ಶೇಕ್ ನವಾಬ್, ಶೇಕ್ ಖಿಜರೋದ್ದಿನ್, ಮೊಹಮ್ಮದ್ ಸಮೀರ್ ಖಾಜಿ, ಮೊಹಮ್ಮದ್ ಅಜೀಮ್ ಖಾಜದಾರ್, ಮೊಹಮ್ಮದ್ ಅಕ್ರಮ್, ಮೊಹಮ್ಮದ್ ಹಬೀಬ್, ಮೊಹಮ್ಮದ್ ಜಕಿ ಖಲೀಫಾ, ಮಹಮ್ಮದ್ ಸರ್ಫರಾಜ್, ಮೊಹಮ್ಮದ್ ಶೂಹೇಬ್, ಮೊಹಮ್ಮದ್ ಮೋಹಸಿನ್, ಮೊಹಮ್ಮದ್ ಮಜರ್, ಸಾಜಿದ್ ಅಲಿ, ವೈಸೋದ್ದಿನ್ ಸೇರಿದಂತೆ ಮುಂತಾದವರು ಇದ್ದರು.