ಕೊರೋನಾ ತಡೆ ಹಿನ್ನೆಲೆ: ಆಧಾರ್ ಕಾರ್ಡ್ ಓಟಿಪಿ ಪಡೆದು ಪಡಿತರ ವಿತರಣೆಗೆ ಆದೇಶ

0
81

ಬೆಂಗಳೂರು: ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಜೀವಮಾಪನ (ಬಯೋ ಮೆಟ್ರಿಕ್) ಸಂಗ್ರಹಣೆ ಮೂಲಕ ಪಡಿತರ ವಿತರಿಸುವುದರ ಬದಲು ಆಧಾರ್ ಆಧಾರಿತ ಮೊಬೈಲ್ ಓ.ಟಿ.ಪಿ. ಮೂಲಕ ಪಡಿತರ ವಿತರಿಸಲು ಆಹಾರ ಸರಬರಾಜು ಇಲಾಖೆಯ ಆಯುಕ್ತರು ಆದೇಶ ನೀಡಿದ್ದಾರೆ.

ಆದ್ದರಿಂದ ಆಧಾರ್ ಆಧಾರಿತ ಮೊಬೈಲ್ ಓ.ಟಿ.ಪಿ ಮೂಲಕ ಪಡಿತರ ವಿತರಣೆಯನ್ನು ಜಾರಿಗೆತರಲಾಗಿದೆ. ಇದರಲ್ಲಿ ಪಡಿತರ ಚೀಟಿದಾರರ ಮೊಬೈಲ್ ಸಂಖ್ಯೆ ಆಧಾರ್‌ನಲ್ಲಿ ನೋಂದಾಯಿಸಲ್ಪಟ್ಟಿದ್ದರೆ ಮಾತ್ರ ಅಂತಹ ಪಡಿತರ ಚೀಟಿದಾರರ ಮೊಬೈಲ್‌ಗೆ ಒ.ಟಿ.ಪಿ ಬರಲಿದೆ, ಒ.ಟಿ.ಪಿಯನ್ನು ನೋಂದಣಿ ಮಾಡಿ ಪಡಿತರ ವಿತರಿಸಬಹುದು, ಆದರೆ ಒಂದು ಪಡಿತರ ಚೀಟಿಗೆ ನೀಡಿದ ಮೊಬೈಲ್ ಸಂಖ್ಯೆಯನ್ನು ಇನ್ನೊಂದು ಪಡಿತರ ಚೀಟಿಗೆ ನೀಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಒಂದೊಮ್ಮೆ ಪಡಿತರ ಚೀಟಿದಾರರ ಕುಟುಂಬ ಸದಸ್ಯರಲ್ಲಿ ಮೊಬೈಲ್ ಇಲ್ಲದೇ ಇದ್ದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಕಡೆಯ ಪ್ರಯತ್ನವಾಗಿ ಈಗಾಗಲೇ ಲಭ್ಯವಾಗಿರುವು ಬೆರಳಚ್ಚು ಬಯೋಮೆಟ್ರಿಕ್ ಆಧಾರಿತ ಪಡಿತರ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಆದರೆ ಇದಕ್ಕೆ ಶುಚಿತ್ವ ಕಾಪಾಡುವ ಸಂಬಂಧವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ನೀರು ಮತ್ತು ಶುದ್ದೀಕರಿಸುವ ಸಾಬೂನು/ಸ್ಯಾನಿಟೈಸರ್‌ ಕಡ್ಡಾಯವಾಗಿ ಇಡತಕ್ಕದ್ದು. ಪಡಿತರ ಚೀಟಿದಾರರು ಬೆರಳಚ್ಚು ನೀಡುವ ಮೊದಲು ಕೈಯನ್ನು ಶುದ್ಧವಾಗಿ ತೊಳೆದುಕೊಳ್ಳಲು ನಿರ್ದೇಶನ ನೀಡುವುದು ಹಾಗೂ ಬೆರಳಚ್ಚು ಸಂಗ್ರಹಿಸುವ ಪಾರದರ್ಶಕ ಸ್ಥಳವನ್ನು ಪ್ರತಿ ಪಡಿತರ ಚೀಟಿದಾರ ಬೆರಳಚ್ಚು ನೀಡುವ ಮೊದಲು ಶುದ್ದೀಕರಣ ಮಾಡುವಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here