ಮಹಾನಗರ ಪಾಲಿಕೆಯಿಂದ ಮನೆ ಮನೆಗೆ ಅಗತ್ಯ ವಸ್ತುಗಳ ಪುರೈಕೆ: ಮನೆಯಿಂದ ಹೊರಗಡೆ ಬರದಿರಲು ಮನವಿ

0
114

ಕಲಬುರಗಿ: ಮಹಾನಗರ ವ್ಯಾಪ್ತಿಯಲ್ಲಿ ಕೊವಿರ್-19 ಸೋಂಕು ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡಗಳಲ್ಲಿ ದಿನನಿತ್ಯದ ಬಳಕೆ ವಸ್ತುಗಳು (Essential Commodities ) ಮನೆ-ಮನೆಗೆ ತೆರಳಿ ಸರಬರಾಜು ಮಾಡಲು ಸಿಬ್ಬಂದಿ ನೇಮಿಸಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಕಲಂ 144 ರನ್ವಯ ನಿಷೇಧಾಜ್ಞೆ 31.03.2020 ರ ರಾತ್ರಿ 8.00 ಗಂಟೆಯವರೆಗೆ ಆದೇಶ ಜಾರಿ ಇದ್ದು ಯಾರು ಮನೆಯಿಂದ ಹೊರಗಡೆ ಬರಬೇಡಿ ದಿನನಿತ್ಯದ ಬಳಕೆ ವಸ್ತುಗಳು ಮನೆ ಮನೆಗೆ ಸರಬರಾಜು ಮಾಡಲು ನಿಗಧಿಪಡಿಸದ ಪ್ರದೇಶ/ಕ್ಷೇಪ್ರ/ವಾರ್ಡಗಳಲ್ಲಿ ಸಾರ್ವಜನಿಕರಿಗಾಗಿ ತರಕಾರಿ ಮಾರಾಟವನ್ನು ಮಾಡುವುದಕ್ಕೆ ಮಾರಾಟಗಾರರನ್ನು ನಿಯೋಜಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೂಚನೆ ಹೊರಡಸಿಲಾಗಿದೆ ಎಂದು ತಮ್ಮ ಪ್ರಕಟಣೆಯಲ್ಲಿ ನೀಡಿದ್ದಾರೆ.

Contact Your\'s Advertisement; 9902492681

ಅಗತ್ಯ ಮಾಗ್ರಿಗಳನ್ನು ಜನ ಸಂದಣಿ ಆಗದೇ ರೀತಿಯಲ್ಲಿ ಮುಂಜಾಗ್ರತೆ ಕ್ರಮ ವಹಿಸುವುದು, ಸಾಮಾಜಿಕ ದೂರ ವ್ಯಕ್ತಿಗಳ ಮಧ್ಯ ಕನಿಷ್ಠ 6 ಪೀಟಿನ್ ಅಂತರ ಕಾಪಾಡುವುದು. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯನ್ನು ಆಗದಂತೆ ನೋಡಿಕೊಳ್ಛದು. ಮಾರಾಟಗಾರರು ಸುಚಿಸಿದ ಪ್ರದೇಶ/ಕ್ಷೇಪ್ರ/ವಾರ್ಡಗಳಲ್ಲಿ ಮಾತ್ರ ಮಾರಾಟ ಮಾಡಲು ಆದೇಶ ನೀಡಲಾಗಿದೆ.

ವಾರ್ಡಗಳಲ್ಲಿ ಮಾರಾಟಗಾರರೊಂದಿಗೆ ಕೆಲಸ ನಿರ್ವಹಿಸುವ ಸಿಬ್ಬಂದಿಗಳ ವಿವರ ಮತ್ತು ದೂರವಾಣಿ ಸಂಖ್ಯೆಗಳು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here