ಕಲಬುರಗಿ: ಈ ಲಾಕ್ ಡೌನ್ ಅವಧಿಯಲ್ಲಿ ಸಮಗ್ರ ಪಡಿತರ ಹಾಗೂ ಆರೋಗ್ಯ ಪರಿಕರಗಳ ಪ್ಯಾಕೇಜ್ ನ್ನು ಮನೆ ಮನೆಗೆ ತಲುಪಿಸುವಂತೆ, ಕೃಷಿಕೂಲಿಕಾರರು, ಬಡರೈತರು, ದಲಿತರು ಮತ್ತು ಮಹಿಳೆಯರ ಸಾಲಮನ್ನಾ ಹಾಗೂ ಕರೋನಾ ಸಮಸ್ಯೆಗೆ ಪೂರಕವಾಗಿ ಅಗತ್ಯ ಆರೋಗ್ಯ ಕ್ರಮ ಕೈಗೊಳ್ಳುವಂತೆ, ಕುಟುಂಬಕ್ಕೆ ಕನಿಷ್ಠ 2,000 ರೂ. ನೆರವು ನೀಡಿಬೇಕು ರಾಜ್ಯ ಸರಕಾರಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿ ಸದಸ್ಯ ಶರಬಸಪ್ಪ ಮಮಶೇಟಿ ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ಸಮಿತಿ ಜಿಲ್ಲೆಯಲ್ಲಿ ಸ್ವಯಂಪ್ರೇರತಿ ಕೊರೋನಾ ಪರಿಹಾರ ವಿಪತ್ತು ಸಂಗ್ರಹಕ್ಕೆ ಮುಂದಾಗಿದ್ದು, ತಕ್ಷಣವೇ, ಆಯಾ ತಾಲೂಕಾ ಸಮಿತಿಯ ಅಲ್ಲಲ್ಲಿಯೇ ಮನವಿ ಮಾಡಿ ಸಂಗ್ರಹಿಸಿ ಅಲ್ಲಲ್ಲಿಯೇ ಅಗತ್ಯವಿರುವವರ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಇಲ್ಲವೇ ಸಾದ್ಯವಿದ್ದಲ್ಲಿ ಕೈಗೆ ನೀಡಿ ಅಥವಾ ಅವಕಾಶಗಳಿದ್ದಲ್ಲಿ ವಸ್ತು ರೂಪದ ನೆರವನ್ನು ಸಂಗ್ರಹಿಸಿ ನೀಡಬಹುದಾಗಿದು ಎಂದು ಕರೆ ನೀಡಿದ್ದಾರೆ.
ಆ ರೀತಿ, ಸ್ವತಃ ನೆರವಾಗಿ ಮತ್ತು ಸಂಗ್ರಹಿಸಿ ನೆರವಾದ ವಿವರವಾದ ಮಾಹಿತಿಗಳನ್ನು ಪ್ರತಿಯೊಂದು ಶಾಖೆಯು ತನ್ನ ಜಿಲ್ಲಾ ತಮ್ಮ ಮೇಲಿನ ಹಂತದ ಸಮಿತಿಗಳ ಮೂಲಕ ರಾಜ್ಯ ಸಮಿತಿಗೆ ಮಾಹಿತಿ ನೀಡಲು ಅವರು ಪ್ರಕರಣೆಯಲ್ಲಿ ಮನವಿ ಮಾಡಿದ್ದಾರೆ.