ಹೆಲ್ತ್ ಕಿಟ್-ಫುಡ್ ಕಿಟ್ ವಿತರಿಸುವಂತೆ ಮುಖ್ಯಮಂತ್ರಿಗಳಿಗೆ ಸಿಂಧೆ ಮನವಿ

0
155

ಕಲಬುರಗಿ: ಕರೋನಾ ವೈರಸ್ ತಡೆಗಟ್ಟಲು ರಾಜ್ಯದಲ್ಲಿ ಮೈಕಿನಿಂದ ಹೆಚ್ಚಿನ ಪ್ರಚಾರ, ಪೋಲಿಸ್ ಬಂದೊಬಸ್ತು ಮತ್ತು ಹೆಲ್ತ್ ಕಿಟ್ ಮತ್ತು ಫುಡ್ ಕಿಟ್ ವಿತರಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜೈಭೀಮ ಶಿಂಧೆ ಅವರು ಮನವಿ ಮಾಡಿದ್ದಾರೆ.

ಈಗಾಗಲೇ ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕರೋನಾ ವೈರಸ್ ಹರಡದಂತೆ ತಮ್ಮ ನೇತೃತ್ವದ ಸರಕಾರ ಮಾರ್ಚ್ ೩೧ ವರೆಗೂ ಲಾಕ್ ಡೌನ್ ಆದೇಶ ಮಾಡಲಾಗಿದ್ದು . ಅದೇ ರೀತಿ ನಿನ್ನೆ ಸಾಯಂಕಾಲ ದೇಶದ ಪ್ರಧಾನಿ ೨೧ ದಿನಗಳ ಕಾಲ ಇಡಿ ದೇಶದಲ್ಲಿ ಲಾಕ್ ಡೌನ್ ಮಾಡಲು ಆದೇಶ ನೀಡಿರುತ್ತಾರೆ. ಇದರಿಂದ ಜನಜೀವನ ಸಂಪೂರ್ಣ ಸ್ಥಬ್ಧವಾಗಿದೆ.

Contact Your\'s Advertisement; 9902492681

ನಮ್ಮ ರಾಜ್ಯದಲ್ಲಿ ಒಂದು ಕಡೆ ವೈರಸ್ ನಿಯಂತ್ರಣವಾದರೆ ಮತ್ತೊಂದು ಕಡೆ ಶೇಕಡಾ ೬೦% ಜನರು ಕಟ್ಟಡ ಕಾರ್ಮಿಕರು, ಕೂಲಿಕಾರರು, ಬೀದಿ ವ್ಯಾಪಾರಿಗಳು ಇತ್ಯಾದಿ ಅಸಂಘಟಿತ ಕಾರ್ಮಿಕರು ಕೂಲಿನಾಲಿಯಿಂದ ಬದುಕುವವರು ಇದ್ದಾರೆ. ಕೆಲಸವಿಲ್ಲದೇ ಆಧಾಯ ವಿಲ್ಲದೆ ದಿನ ನಿತ್ಯದ ವಸ್ತುಗಳನ್ನು ಖರೀದಿ ಮಾಡಲು ಹಣವಿರದೆ ಬಹಳ ಸಂಕ?ಕ್ಕೆ ಗುರಿಯಾಗಿದ್ದಾರೆ. ಇದರಿಂದ ಕರೋನಾ ವೈರಸ್ ಖಾಯಿಲೆಯಿಂದ ಸಾಯುವವರಿಗಿಂತ ಹಸಿವಿನಿಂದ ಸಾಯುವ ಜನ ಸಂಖ್ಯೆ ಹೆಚ್ಚಾಗುವ ಸಂಭವವಿದೆ.

ಆದರಿಂದ ರಾಜ್ಯ ಸರಕಾರದ ವತಿಯಿಂದ ಬಡ ಜನರಿಗೆ ಕೇರಳ, ಆಂದ್ರ ಸರಕಾರದ ಮಾದರಿಯಲ್ಲಿ ಫುಡ್ ಕಿಟ್ ಬದುಕಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಉಚಿತವಾಗಿ ಒದಗಿಸಬೇಕು.

ಜೊತೆಗೆ ಪ್ರತಿ ಕುಟುಂಬಕ್ಕೆ ಎರಡು ಫೆನಾಯಿಲ್ ಬಾಟಲ್ ೫೦೦mಟ, ೨೫ ಮಾಸ್ಕ್ ಗಳು ಸ್ಯಾನಿಟೈಸರ್ ಉಚಿತವಾಗಿ ನೀಡಬೇಕು. ತುರ್ತು ಚಿಕಿತ್ಸಾಲಯಗಳು ಒದಗಿಸಬೇಕು. ನಗರಗಳಲ್ಲಿ ಗ್ರಾಮಗಳಲ್ಲಿ ವೈರಸ್ ಹರಡದಂತೆ ಟ್ಯಾಂಕರಗಳ ಮೂಲಕ ಕ್ರಿಮಿ ನಾಶಕ ಸಿಂಪಡಿಸಬೇಕು. ಕರೋನಾ ವೈರಸ್ ಹರಡದಂತೆ ಪ್ರತಿ ಹಳ್ಳಿ, ನಗರ, ಮಹಾನಗರಗಳಲ್ಲಿ, ಮೈಕಿನ ಮೂಲಕ ಪ್ರಚಾರ ಮಾಡಬೇಕು ಪೋಲಿಸರು ರಸ್ತೆ ಮೇಲೆ ಸಂಚಾರ ತಡೆದರೆ ಸಾಲದು ಆದರೆ ಹಳ್ಳಿಗಳಲ್ಲಿ, ವಾರ್ಡಗಳಲ್ಲಿ ಜನರು ಗುಂಪುಗುಂಪಾಗಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ.

ಆದ್ದರಿಂದ ಪೋಲಿಸರು ಗ್ರಾಮಗಳ ಒಳಗಡೆ ಪ್ರವೇಶಿಸಿ ಪ್ರಚಾರ ಮಾಡುವುದು ಅಗತ್ಯವಿದೆ. ಈ ವಿ?ಯಗಳನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿ ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕೆಂದು ಜೈಭೀಮ ಸಿಂಧೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here