ಕೊರೋನಾ: ಏ.14ರ ವರೆಗೆ ಜನತಾ ಕರ್ಪ್ಯೂಗೆ ಕೂಡಿ ಸ್ವಾಗತ

0
213

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರನ್ನು ಕರೋನಾದಿಂದ ದೂರವಿರಲು ಕರೋನಾ ಹರಡದಂತೆ ದೇಶದ ಜನತೆಗೆ ಏಪ್ರೀಲ್ ೧೪ ರ ವರೆಗೆ ಜನತಾ ಕರ್ಫ್ಯೂ ಆದೇಶಿಸಿ ಜನರು ಮನೆಯಿಂದ ಹೊರಬರದಂತೆ ದಿಗ್ಬಂಧನಕ್ಕೆ ಆದೇಶಿಸಿದಕ್ಕೆ ಕಲ್ಯಾಣ ಕರ್ನಾಟಕ ಕೋಲಿ ಸಮಾಜವು ಸ್ವಾಗತಿಸುತ್ತದೆ ಎಂದು ಸಮಾಜದ ಅಧ್ಯಕ್ಷ ಶಾಂತಪ್ಪ ಕೂಡಿ ಅವರು ತಿಳಿಸಿದ್ದಾರೆ.

ದೇಶದ ಜನತೆಯು ನಮ್ಮನ್ನು ನಾವು ಕಾಪಾಡುವಗೋಸ್ಕರ್ ಕಟ್ಟು ನಿಟ್ಟಾಗಿ ಆದೇಶವನ್ನು ಪಾಲಿಸಿ ಮನೆಯಿಂದ ಯಾರು ಹೊರಗಡೆ ಬರಬಾರದು ಎಂದು ಕೂಡಿ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ. ದೇಶದ ಅನೇಕ ಹಿಂದುಳಿದ ಬಡ ಕೋಲಿ ಕಾರ್ಮಿಕರು ದಿನಗೂಲಿಗಳು ಬಿದಿವ್ಯಾಪಾರಿಗಳು ಆಟೋ ರಿಕ್ಷಾ ನಡೆಸುವವರು, ಮನೆ ಕೆಲಸ ಮಾಡುವ ಕೆಲಸಗಾರರಿಗೆ ಒಂದು ಹೊತ್ತು ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟಕರವಾಗಿದೆ ಅದಕ್ಕಾಗಿ ಪ್ರಧಾನ ಮಂತ್ರಿ , ಮಂತ್ರಿಗಳಲ್ಲಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಲಕ್ಷಾಂತರ ಜನ ಕೊಲಿ ಕಾರ್ಮಿಕರು ಕಾರ್ಮಿಕ ಕಾರ್ಡ್ ಮಾಡಿಸಿರುವುದಿಲ್ಲಾ, ತಾವು ಪ್ರಕಟಿಸಿರುವ ಕಾರ್ಮಿಕ ಬಡ ಜನತೆ ಖಾತೆಗೆ ಒಂದು ಸಾವಿರ ರೂ. ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

Contact Your\'s Advertisement; 9902492681

ಅದು ಯಾವುದಕ್ಕೂ ಸರಿ ಹೋಗುವುದಿಲ್ಲಾ ಮತ್ತು ವಿಷೇಶವಾಗಿ ಕಲ್ಯಾಣ ಕರ್ನಾಟಕದ ಕೂಲಿ ಕಾರ್ಮಿಕರು ಕಾರ್ಮಿಕರ ಕಾರ್ಡ್ ಮಾಡಿಸಿರುವುದಿಲ್ಲಾ ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿ ಬಿ.ಪಿ.ಎಲ್,ಕಾರ್ಡ್ ಹೊಂದಿರುವ ಕಡು ಬಡವರ ಖಾತೆಗೆ ಪ್ರತಿ ಕುಟುಂಬಕ್ಕೆ ೫೦೦೦ ರೂ. ಅವರಿಗೆ ನೇರವಾಗಿ ಜಮಾ ಮಾಡಬೇಕೆಂದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಹಾಗೂ ಕಲ್ಯಾಣ ಕರ್ನಾಟಕ ಕೋಲಿ ಸಮಾಜದ ಸಂಘಟನಾ ಸಮಿತಿಯ ಅಧ್ಯಕ್ಷ ಶಾಂತಪ್ಪ ಕೂಡಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here