ಕಲಬುರಗಿ: ಜಿಲ್ಲಾದ್ಯಂತ ತರಕಾರಿ ಅಂಗಡಿ ಮತ್ತು ಬಡ ಕೂಲಿ ಕಾರ್ಮಿಕರಿಗಾಗಿ ರಾಜ್ಯ ಸರಕಾರ ಗಂಜಿ ಕೇಂದ್ರ ತೆರೆದು ಪ್ರತಿ ವಾರ್ಡಗಳಲ್ಲಿನ ಮನೆ ಮನೆಗೆ ಅಗತ್ಯ ವಸ್ತುಗಳ ಪುರೈಕೆಯನ್ನು ದೆಹಲಿ ಸರಕಾರದ ಮಾದರಿಯಲ್ಲಿ ಮಾಡಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಒತ್ತಾಯಿಸಿ ಇಂದು ನಗರದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದೇಶದಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಜಿಲ್ಲಾದ್ಯಂತ ಕಲಂ 144 ಜಾರಿ ಇದೆ. ಆದರೆ ಕಾರ್ಮಿಕರು ದಿನಗೂಲಿ ನೌಕರರು ಮತ್ತು ನಿರ್ಗತಿಕರು ಕಳೆದ ಏಂಟು ದಿನಗಳಿಂದ ಆತಂಕ ಪರಿಸ್ಥಿತಿಯಲ್ಲಿ ಇದ್ದಾರೆ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ತಕ್ಷಣ ಗಂಜಿ ಕೇಂದ್ರವನ್ನು ತೆರೆದು ಇಂತಹ ಕಟುಂಬಗಳಿಗೆ ಆಸರೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿ ಅಗತ್ಯ ವಸ್ತುಗಳು ಖರೀದಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿದ್ದು, ಇದರಿಂದ ಕೊರೋನಾ ತಟೆಗೆ ಹಿನ್ನಡೆ ಯಾಗುತ್ತಿದೆ. ದೆಹಲಿ ಸರಕಾರ 5 ಸಾವಿರ ಮನೆಗೆ ಅಗತ್ಯ ವಸ್ತುಗಳ ಪುರೈಸು ಯೋಜನೆ ಒಂದು ರೂಪಿಸಿದೆ, ರಾಜ್ಯ ಸರಕಾರ ಇಂತಹ ಯೋಜನೆ ಹಮ್ಮಿಕೊಳಬೇಕೆಂದು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದ್ದರು.