ಚಿಂಚೋಳಿ: ತಾಲೂಕಾದ್ಯಂತ ಜನರ ಸುರಕ್ಷೆ ಕಾಪಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಸರಕಾರದ ಆದೇಶ ಎಲ್ಲರೂ ಪಾಲಿಸುತ್ತಿರುವುದು ಸಂತೋಷ ತಂದಿದೆ ಎಲ್ಲರು ಸೇರಿ ಕೊರೋನಾ ವೈರಸ್ ತೆಡೆಗೆ ಶ್ರಮಿಸಬೇಕೆಂದು ಚಿಂಚೋಳಿ ಕ್ಷೇತ್ರದ ಶಾಶಕ ಡಾ. ಅವಿನಾಶ ಜಾಧವ ಹೇಳಿದರು.
ಅವರು ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಆಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಮಹಾಮಾರಿ ಕೊರೋನಾ ಸೋಂಕು ಕ್ಷೇತ್ರೆದಲ್ಲಿ ಹರಡದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳು ಶ್ರಮಿಸುತ್ತಿರುವ ಕಾರ್ಯಕ್ಕೆ ಸಲಾಂ ಹಾಕಿ, ಕೋವಿಡ್-19 ತಡೆಗಟ್ಟಲು ಪಣತೊಡಬೇಕೆಂದು ಕರೆ ನೀಡಿದರು.
ಈ ವೇಳೆಯಲ್ಲಿ ತಾಲ್ಲೂಕು ಅಧಿಕಾರಿಗಳು ಸೇರಿದಂತೆ ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಇದ್ದರು.