ಚಿತ್ತಾಪುರ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತಾಲೂಕಿನ ವಿವಿಧೆಡೆ ಕಿರಣಿ, ಮೆಡಿಕಲ್ ಅಂಗಡಿಗಳ ಮುಂದೆ 1 ಮೀಟರ್ ಚೌಕಾಕಾರದ ಚಿತ್ರ ಬಿಡಿಸಿ ಜಾಗೃತಿ ಮೂಡಿಸಲಾಗಿದ್ದು ಅಂಗಡಿ ಮಾಲೀಕರು ಮತ್ತು ಗ್ರಾಹಕರ ನಡುವೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಪಿಎಸ್ಐ ಶ್ರೀಶೈಲ್ ಅಂಬಾಟಿ ಎಚ್ಚರಿಸಿದರು.
ಕೊರೊನ್ ವೈರಸ್ ತಡೆಗಟ್ಟಲು ದೇಶದ ಎಲ್ಲಡೆ 21 ದಿನ ಲಕ್ ಡೌನ್ ಆಗಿದ್ದು ಈ ಹಿನ್ನೆಲೆಯಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಬಂದರೆ ವರ್ತಕರು ಮತ್ತು ಗ್ರಾಹಕರ ನಡುವೆ 1 ಮೀಟರ್ ಸಾಮಾಜಿಕ ಅಂತರ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಭಾಶ್ಚಂದ್ರ ಪವಾರ್, ಶರಣು ಬಳ್ಳಾ, ಭೀಮಸಿಂಗ್ ನಾಗೇಶ್, ವಿಶ್ವಕರ್ಮ, ಸೂರ್ಯಕಾಂತ್ ಇಟಗಿ, ಮಹೇಶ್ ರೆಡ್ಡಿ ಪೊಲೀಸ್. ಸೇರಿದಂತೆ ಇತರರಿದ್ದರು.