ಚಿತ್ತಾಪುರ: ಪ್ರತಿವರ್ಷದಂತೆ ಈ ಬಾರಿಯ ಏಪ್ರಿಲ್ 26ರಂದು ಬಸವ ಜಯಂತಿ ಆಚರಣೆ ಹಾಗೂ ಉಚಿತ ಸಾಮೂಹಿಕ ವಿವಾಹಗಳನ್ನು ಬಸವ ಸಮಿತಿ ವತಿಯಿಂದ ಮಾಡಲು ನಿರ್ಧರಿಸಲಾಗಿತ್ತು.
ಆದರೆ ಕೊರೊನ್ ವೈರಸನಿಂದ ಸಾಮೂಹಿಕ ವಿವಾಹ ಸಮಾರಂಭ ರದ್ದುಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ ಪಾಟೀಲ್ ಕರದಾಳ ತಿಳಿಸಿದ್ದಾರೆ. ಈ ಕುರಿತು ಮೊದಲೇ ಪ್ರಕಟಣೆ ನೀಡಿದಂತೆ ಈಗಾಗಲೇ ಕೆಲವು ವಧು-ವರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನ್ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ 21 ದಿನಗಳ ಕಾಲ ಲಾಕ್ ಡೌನ್ ಮಾಡಿ ಆದೇಶವನ್ನು ಹೊರಡಿಸಿದ್ದಾರೆ, ಹೀಗಾಗಿ ಬಸವ ಜಯಂತಿ ಆಚರಣೆ ಮತ್ತು ಉಚಿತ ಸಾಮೂಹಿಕ ವಿವಾಹಗಳು ಸಮಾರಂಭವನ್ನು ರದ್ದುಪಡಿಸಲು ಸಮಿತಿ ನಿರ್ಧರ ಕೈಗೊಂಡಿದೆ ಎಂದರು.