ಕಲಬುರಗಿ: ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿರ ನೇತೃತ್ವದಲ್ಲಿ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೈಗೊಂಡ ಕ್ರಮದ ಕುರಿತು ನಡೆದ ಸಭೆಯಲ್ಲಿ ಸಚಿವರು ಮತ್ತು ರೈತ ಮುಖಂಡರ ಮದ್ಯೆ ಮಾತಿನ ಚಕಮಕಿ ನಡೆದಿದ್ದು ನಂತರ ಮುಖಂಡರನ್ನು ಸಭೆಯಿಂದ ಪೊಲೀಸರು ಹೊರ ದಬ್ಬಿರುವ ಘಟನೆ ನಡೆಯಿತು.
ಸಭೆಯಲ್ಲಿ ಕೊರೋನಾ ಮಹಾಮಾರಿ ವಿಕೋಪ ಹೆಚ್ಚಾಗಿದ್ದು ಜಿಲ್ಲೆಯಲ್ಲಿ ದೇಶದ ಮೊದಲ ವ್ಯಕ್ತಿ ಬಲಿಗೆ ಕಲಬುರಗಿ ಸಾಕ್ಷಿಯಾಗಿದೆ. ಈ ಪರಿಸ್ಥಿತಿಯಲ್ಲಿ ಎಲ್ಲರ ನಿರೀಕ್ಷೆ ಆರೋಗ್ಯ ಇಲಾಖೆಯ ಮೇಲೆ ಇದೆ. ಆದರೆ ಜಿಲ್ಲೆಯ ಇ.ಎಸ್.ಐ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಎದ್ದು ಕಾಣುತ್ತಿರುವ ಬಗ್ಗೆ ರೈತ ಸಂಘದ ಮುಖಂಡ, ಸಿಪಿಐಎಂ ಜಿಲ್ಲಾ ಮುಖಂಡರಾದ ಮಾರುತಿ ಮಾನ್ಪಡೆ ಸಮಸ್ಯೆ ಬಗ್ಗೆ ಸಚಿವರ ಮದ್ಯೆ ಮಾತಿನ ಚಕಮಕಿ ನಡೆದು ಕೋಪಗೊಂಡ ಸಚಿವರು ಮುಖಂಡನನ್ನು ಸಭೆಯಿಂದ ಹೊರದಬ್ಬಲು ಆದೇಶಿಸಿದರು.
ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಶರತ್ ಬಿ ಅವರು ಪ್ರವೇಶಿಸಿ ಚರ್ಚೆ ಮಾಡುವುದಾಗಿ ಮಾನ್ಪಡೆ ಅವರಿಗೆ ಆಹ್ವಾನ ನೀಡಿದರು.
ಪೊಲೀಸರು ಸಚಿವರ ಎದುರು ಮಾನ್ಪಡೆಯವರನ್ನು ಹೊರದಬ್ಬಿ ಸಭೆಯಿಂದ ಹೊರಗೆ ಕಳುಹಿಸಲಾಯಿತು. ಮಾನ್ಪಡೆ ಬಿಜೆಪಿ ಅವರು ಮನವಿ ನೀಡಿದರೆ ಸ್ವೀಕರಿಸುತ್ತಾರೆ ನಾವೆನು ಮಾಡಿದ್ದೀವಿ ಎಂದು ಸಭೆ ಹೊರಗಡೆ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕು ಮುನ್ನ ಬಿಜೆಪಿ ಪಕ್ಷದ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು.