ಮನೆಯಿಂದ ಹೊರ ಬರಬೇಡಿ ಶಾಸಕ ಸುರೇಶ ಗೌಡ

0
46

ನಾಗಮಂಗಲ: ಕೊರೋನ ಭೀತಿಯಲ್ಲಿರುವ ಕ್ಷೇತ್ರದ ಜನತೆಯೊಂದಿಗೆ ಕೈಲಾದಷ್ಟು ಸೇವೆ ಮಾಡಲು ಬಯಸುತ್ತೇನೆ ಎಂದು ಶಾಸಕ ಸುರೇಶಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಭಾರತ ಲಾಕ್ ಡೌನ್ ನಿಂದ ಬಾಂಬೆ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ತಾಲೂಕಿನ ಸ್ವಗ್ರಾಮಕ್ಕೆ ಆಗಮಿಸಿರುವ ವ್ಯಕ್ತಿಗಳು ಸಾಮಾಜಿಕವಾಗಿ ಅಂತರವನ್ನು ಕೊಳ್ಳಬೇಕಾಗಿದೆ. ಕೊರೋನ ವೈರಸ್ ಬಗ್ಗೆ ಬಹಳ ನಿರೀಕ್ಷೆ ವಹಿಸದಿರುವುದು ಬಹಳ ಆತಂಕವನ್ನು ಹುಟ್ಟಿಸಿದೆ.

Contact Your\'s Advertisement; 9902492681

ಜನ ರಕ್ಷಣೆಗಾಗಿ ಮನೆಗಳಿಗೆ ಸ್ಯಾನಿ ಟೆಜರ್ ಹಾಗೂ ಮಾಸ್ಕ್ಳಗಳನ್ನು ವಿತರಿಸುವ ಭರವಸೆ ನೀಡಿದರು. ತಾಲೂಕಿನಾದ್ಯಂತ ಈವರೆಗೆ ಯಾವುದೇ ಕರೋನಾ ವೈರಸ್ ಪತ್ತೆಯಾಗಿಲ್ಲ ಎಂಬುವುದು ಸಮಾಧಾನಕರ ವಿಚಾರ. ಆದರೂ ಹೊರಗಿನಿಂದ ಬಂದಿರುವ 33 ಜನರನ್ನು ಕ್ವಾರಂಟ್ಟಿನ್ಲ್ ಲ್ಲಿ ಇರಿಸಲಾಗಿದೆ. ವಿಶ್ವದಾದ್ಯಂತ ಕೊರೋನ ವೈರಸ್ ತಡೆಯಲು ಸರ್ಕಾರವು ಲಾಕ್ ಡೌನ್ ಮಾಡಿ ಕಟ್ಟುನಿಟ್ಟಿನಿಂದ ಪಾಲಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಹೇಳಿದರು.

ಜನರು ಸ್ವಯಂ ಗೃಹಬಂಧನ ವಿಧಿಸಿಕೊಂಡ ಮನೆಯಿಂದ ಹೊರ ಬರಬಾರದೆಂದು ಮನವಿ ಮಾಡಿದರು. ಇದನ್ನು ಮೀರಿದಂಥ ಅವರನ್ನು ನಿರ್ಧಾಕ್ಷಣ್ಯ ವಾಗಿ ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು. ದಿನನಿತ್ಯ ದುಡಿದು ಅಲ್ಲೇ ಜೀವ ನಡೆಸುವ ಕೂಲಿ ಕಾರ್ಮಿಕರನ್ನು ಗುರುತಿಸಿ ಸಹಾಯಮಾಡಲು ಯೋಜನೆ ರೂಪಿಸಲಾಗುವುದು.

ದಿನನಿತ್ಯ ಬಳಕೆ ವಸ್ತುಗಳನ್ನು ತೆಗೆದುಕೊಂಡು ಬರಲು  ವರ್ತಕರಿಗೆ ಮಾತ್ರ ಪಾಸ್ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಹಸಿಲ್ದಾರ್ ಕುಂಞ ಅಹಮದ್, ಡಿವೈಎಸ್ಪಿ ವಿಶ್ವನಾಥ್, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ತಾಲೂಕಿನ ಆರೋಗ್ಯ ಅಧಿಕಾರಿಗಳಾದ ಟಿ. ಧನಂಜಯ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಅನಂತರಾಜು, ವೈದ್ಯಾಧಿಕಾರಿಗಳಾದ ವೆಂಕಟೇಶ್ ಮತ್ತಿತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here