ಮನೆಯಿಂದ ಯಾರೂ ಹೊರ ಬರದಂತೆ ಶಾಸಕ ರಾಜುಗೌಡ ಮನವಿ

0
53

ಸುರಪುರ: ಕೊರೊನಾ ಎಂಬುದು ಮಹಾಮಾರಿಯಾಗಿ ಇಂದು ಜಗತ್ತನ್ನು ಕಾಡುತ್ತಿದೆ.ಇದರ ನಿರ್ಮೂಲನೆ ಮದ್ದಿನಿಂದಾಗದು,ಆದ್ದರಿಂದ ಎಲ್ಲರು ಮನೆಗಳಲ್ಲಿಯೆ ಇರುವ ಮೂಲಕ ಕೊವಿಡ್-೧೯ ನಿರ್ಮೂಲನೆಗೆ ಸಹಕರಿಸಲು ಶಾಸಕ ನರಸಿಂಹ ನಾಯಕ (ರಾಜುಗೌಡ) ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಗರದ ಆರೋಗ್ಯ ಕೇಂದ್ರದಲ್ಲಿ ತೆರೆಯಲಾದ ಫಿವರ್ ಸೆಂಟರ್‌ಗೆ ಭೇಟಿ ನೀಡಿ ಗ್ರಾಮೀಣ ಭಾಗದಿಂದ ಕೊರೊನಾ ಸೊಂಕು ತಪಾಸಣೆಗೆ ಬಂದವರನ್ನು ವೀಕ್ಷಿಸಿ ಮಾತನಾಡಿ,ತಾಲೂಕಿನಲ್ಲಿ ಹೆಚ್ಚಿನ ಜನ ಗೋವಾ ಮಹಾರಾಷ್ಟ್ರಕ್ಕೆ ಹೋದವರು ಬಂದಿದ್ದರಿಂದ ಎಲ್ಲರ ಪರೀಕ್ಷೆಗೆ ಸಮಸ್ಯೆಯಾಗದಿರಲೆಂದು ಮುಖ್ಯಂತ್ರಿಗಳಿಗೆ ಮನವಿ ಮಾಡಿ ಇನ್ನೂ ಹೆಚ್ಚಿನ ಆರೋಗ್ಯ ಸಿಬ್ಬಂದಿ ಮತ್ತು ಸಲಕರಣೆಗಳನ್ನು ನೀಡಲು ವಿನಂತಿಸಲಾಗಿದೆ ಎಂದರು.ಎಲ್ಲರಿಗೂ ಮಾಸ್ಕ್ ವಿತರಿಸಲು ಈಗಾಗಲೆ ಇಪ್ಪತ್ತು ಸಾವಿರ ಮಾಸ್ಕ್ ತರಿಸಲಾಗುತ್ತಿದೆ ಒಂದೆರಡು ದಿನಗಳಲ್ಲಿ ವಿತರಿಸುವುದಾಗಿ ತಿಳಿಸಿದರು.ಯುವಕರು ವಿನಾಕಾರಣ ಮನೆಯಿಂದ ಹೊರಗೆ ಬರಬೇಡಿ ಒಮ್ಮೆ ಸೊಂಕು ತಗುಲಿದರೆ ಅದರ ಪರಿಣಾಮ ಇಡೀ ಕುಟುಂಬಕ್ಕೆ ಆಗಲಿದೆ ಎಚ್ಚರ ಎಂದರು.ಯಾರೂ ಕೊರೊನಾ ಬಗ್ಗೆ ಸುಳ್ಳು ಮಾಹಿತಿಯನ್ನು ಜಾಲತಾಣಗಳಲ್ಲಿ ಹರಡಬೇಡಿ,ಸುಳ್ಳು ಸುದ್ದಿ ಹರಡುವವರು ನನ್ನ ಫಾಲೊವರ್‌ಗಳಾದರು ಕೇಸು ದಾಖಲಿಸುವಂತೆ ಪೊಲೀಸರಿಗೆ ತಿಳಿಸಿದರು.

Contact Your\'s Advertisement; 9902492681

ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ,ತಾಲೂಕಿನಲ್ಲಿ ಸುಮಾರು ಹತ್ತು ಸಾವಿರದಷ್ಟು ಜನ ಬಂದಿದ್ದಾರೆ.ಎಲ್ಲರನ್ನು ಪರೀಕ್ಷಿಸಲಾಗುವುದು ಎಂದರು.ಈಗಾಗಲೆ ನಿತ್ಯವು ಒಂದರಿಂದ ಒಂದುವರೆ ಸಾವಿರ ಜನರನ್ನು ಪರೀಕ್ಷಿಸಲಾಗುತ್ತಿದೆ.ಯಾರಲ್ಲೂ ಕೊರೊನಾ ಲಕ್ಷಣ ಕಂಡುಬಂದಿಲ್ಲ ಎಂದರು.ಜನರು ತುಂಬಾ ಮುಂಜಾಗ್ರತೆ ವಹಿಸಬೇಕು.ನಿಮಗೆ ಯಾವುದೆ ರೀತಿಯ ಆರೋಗ್ಯದ ಸಮಸ್ಯೆ ಅನಿಸಿದಲ್ಲಿ ತಕ್ಷಣ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ನಿಂಗಣ್ಣ ಬಿರಾದಾರ್,ಮುಖಂಡ ಭೀಮಣ್ಣ ಬೇವಿನಾಳ ಸೇರಿದಂತೆ ಅನೇಕ ಜನ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ನೂರಾರು ಜನರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here