ಸುರಪುರ: ಇಂದು ಕೊರೊನಾ ಎಂಬ iಹಾಮಾರಿ ಇಡೀ ಜಗತ್ತನ್ನೆ ಸಂಕಷ್ಟಕ್ಕೆ ದೂಡಿದೆ.ಅಂದೆ ದುಡಿದು ಅಂದೆ ಬದುಕುವ ಬಡವರಿಗೆ ನಿರ್ಗತಿಕರಿಗೆ ಹೇಳತೀರದಂತ ಸಂಕಷ್ಟ ತಂದೊಡ್ಡಿದೆ ಅಂತವರ ನೆರವಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಾ ನಿಲ್ಲಲಿದೆ ಎಂದು ಎಬಿವಿಪಿ ಪ್ರಮುಖ ಉಪೇಂದ್ರ ನಾಯಕ ಸುಬೇದಾರ ತಿಳಿಸಿದರು.
ನಗರದ ಹಸನಾಪುರ ಕ್ಯಾಂಪ್ ಬಳಿಯ ಹೊರವಲಯದಲ್ಲಿರುವ ನಿರ್ಗತಿಕರ ವಸತಿ ಸ್ಥಳಕ್ಕೆ ಹೋಗಿ ಉಚಿತವಾಗಿ ಅಕ್ಕಿ ಬೇಳೆ ಆಹಾರ ಧಾನ್ಯಗಳ ವಿತರಿಸಿ ಮಾತನಾಡಿ,ಇಂದು ಇವರಂತೆ ಇನ್ನೂ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿವೆ ಅಂತವರಿಗೆ ಎಲ್ಲರು ನೆರವಾಗೋಣ ಎಂದರು.
ಸುಮಾರು ಮೂವತ್ತಕ್ಕು ಹೆಚ್ಚು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಪರಿಷತ್ ಮುಖಂಡರಾದ ನಾಗರಾಜ ಮಕಾಶಿ,ಹಣಮಂತ,ಭೀಮಣ್ಣ ಇತರರಿದ್ದರು.