ಶಹಾಬಾದ: ಸರ್ಕಾರದ ಆದೇಶವನ್ನುಉಲ್ಲಂಘಿಸಿ ಅನಾವಶ್ಯಕವಾಗಿ ರಸ್ತೆಯ ಮೇಲೆ ಓಡಾಡುವ ಬೈಕ್ ಹಾಗೂ ಆಟೋದವರಿಗೆ ದಂಡ ವಿಧಿಸುವ ಮೂಲಕ, ಪೊಲೀಸ್ ಇಲಾಖೆ ಪುಂಡರಿಗೆ ರಸ್ತೆಗಿಳಯದಂತೆ ಬ್ರೇಕ್ ಹಾಕಲು ಮುಂದಾಗಿದ್ದೆವೆ ಎಂದು ಡಿವಾಯ್‌ಎಸ್‌ಪಿ ವೆಂಕನಗೌಡ ಪಾಟೀಲ ತಿಳಿಸಿದ್ದಾರೆ.
ಈಗಾಗಲೇ ಸುಮಾರು 12 ಬೈಕ್ ಹಾಗೂ ಆಟೋದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.ಇನ್ನು ಮುಂದೆ ಹೀಗೆ ಅನಾವಶ್ಯಕವಾಗಿ ರಸ್ತೆಗೆ ಇಳಿದರೇ ಬೈಕ್ ವಶಪಡಿಸಿಕೊಂಡು, ಅವರ ವಿರುದ್ಧ ಕೇಸ್ ವಿಧಿಸಲಾಗುವುದು. ಕೊರೊನಾ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ತಿಳಿದುಕೊಳ್ಳುತ್ತಿಲ್ಲ. ಕೊರೊನಾ ತಡೆಗಟ್ಟಲು ನಾನಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಕೆಲವು ಜನರು ಸಂಜೆ ಹೊತ್ತಿಗೆ ಹೊರಗೆ ಬರುತ್ತಿದ್ದಾರೆ.
ಅನಾವಶ್ಯಕವಾಗಿ ಹೊರಬರಬೇಡಿ. ಔಷಧ ತರಲು ಬರಬೇಕಾದರೆ ಚಾಚುತಪ್ಪದೇ ಮಾಸ್ಕ್ ಬಳಸಿ. ಆಸ್ಪತ್ರೆಗೆ ತೆರಳುವ, ಆರೋಗ್ಯ ಇಲಾಖೆ, ವೈದ್ಯಕೀಯ ಸಿಬ್ಬಂದಿ, ರೊರೊನಾ ತಡೆಗಟ್ಟಲು ಮುಂದಾಗಿರುವ ಇತರ ಇಲಾಖೆಯ ಸಿಬ್ಬಂದಿಗಳಿಗೆ ಗುರುತಿನ ಚೀಟಿ ಖಾತ್ರಿ ಮಾಡಿಕೊಂಡು ಪೆಟ್ರೋಲ್, ಡಿಸೇಲ್ ವಿತರಿಸಲು ಪೆಟ್ರೋಲ್ ಬಂಕ್ ಮಾಲೀಕರಿಗೆ ತಿಳಿಸಲಾಗಿದೆ. ಗುರುತಿನ ಚೀಟಿ ಇಲ್ಲದ ವ್ಯಕ್ತಿಗಳಿಗೆ, ಅನಾವಶ್ಯಕವಾಗಿ ಬಂದವರಿಗೆ ಪೆಟ್ರೋಲ್, ಡಿಸೇಲ್ ಹಾಕಬೇಡಿ ಎಂದು ತಿಳಿಸಲಾಗಿದೆ ಎಂದರು.