ಸುರಪುರ: ರೂಮುಗಳಲ್ಲಿ ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.ಎಲ್ಲಿಯಾದರು ಪಾಸಿಟಿವ್ ಅನ್ನುವ ಮಾಹಿತಿ ತಿಳಿದ ಕೂಡಲೆ ಅವರನ್ನು ಇಲ್ಲಿ ಕರೆತರುವ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ತಿಳಿಸಿದರು.
ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ನೂತನವಾಗಿ ತೆರೆಯಲಾಗುತ್ತಿರುವ ಕೊರೊನಾ ಹೈಸಲೋಶನ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಕೊರೊನ ತಡೆಯಲು ಮುಂಜಾಗ್ರತೆಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಈ ಕಟ್ಟಡದಲ್ಲಿ ಒಟ್ಟು ೪೪ ಕೋಣೆಗಳಿರುವ ಬಗ್ಗೆ ತಿಳಿದು ಬಂದಿದೆ.ಪ್ರತಿ ರೂಮಲ್ಲಿ ೪ ಹಾಸಿಗೆಗಳನ್ನು ತಯಾರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಲಬುರ್ಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಕಮಿಷನರ್ ನಳಿನ್‌ಕುಮಾರ ಅತುಲ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ,ತಹಸೀಲ್ದಾರ ನಿಂಗಣ್ಣ ಬಿರಾದಾರ್,ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ,ತಾಲೂಕು ಪಂಚಾಯತಿ ಇಒ ಅಂಬ್ರೇಶ,ನಗರಸಭೆ ಪೌರಾಯುಕ್ತ ಜೀವನ ಕುಮಾರ ಕಟ್ಟಿಮನಿ,ಕಂದಾಯ ನಿರೀಕ್ಷಕ ಗುರುಬಸಪ್ಪ,ಇಂಜಿನಿಯರ್ ಸುನೀಲ ನಾಯಕ,ವಿಎ ಪ್ರದೀಪ ನಾಲ್ವಡೆ ಇತರರಿದ್ದರು.