ಕೊರೊನಾ ಭೀತಿ: ಒಂದೇ ದಿನದಲ್ಲಿ ಮಹಾರಾಷ್ಟ್ರ ಗಡಿದಿಂದ ದುಮುಕಿದ 697 ಜನ

0
50

ಆಳಂದ: ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇನ್ನಷ್ಟು ಕಟ್ಟೆಚ್ಚರ ವಹಿಸುವುದು ದಿನಕಳೆದಂತೆ ತೀರಾ ಅಗತ್ಯವಾಗಿದೆ.
ಇಲ್ಲವಾದಲ್ಲಿ ಇದುವರೆಗಿನ ಲಾಕ್‌ಡೌನ್ ವ್ಯರ್ಥವಾಗಿ ಜನತೆಗೆ ಮತ್ತಷ್ಟು ಸಂಕಷ್ಟ ಎದುರಿಸುವ ಭೀತಿ ಕಾಡತೊಡಗಿದೆ.

ಈಗಾಗಲೇ ಈ ವೈರಸ್ ಹರಡದಂತೆ ಕೈಗೊಂಡ ಜಿಲ್ಲಾಡಳಿತ ಕ್ರಮವನ್ನು ಪ್ರಶಂಸನೆಯಲ್ಲಿದೆ. ಆದರೆ ಇದನ್ನೇ ಮುಂದಿಟ್ಟುಕೊಂಡು ಹೊರಗಿನಿಂದ ಬಂದವರ ಮೇಲೆ ನಿಗಾವಹಿಸದೆ ನಿರ್ಲಕ್ಷಿಸಿದರೆ ಅನಾಹುತ ಸೃಷ್ಟಿಸುವ ಆತಂಕ ಮೂಡಿಸತೊಡಡಗಿದೆ.

Contact Your\'s Advertisement; 9902492681

ನೆರೆಯ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು. ಅಲ್ಲಿಗೆ ದುಡಿಯಲು ಹೋಗಿರುವ ಸಾವಿರಾರು ಮಂದಿ ನಿತ್ಯ ಮರಳಿ ಖಜೂರಿ, ಮಾದನಹಿಪ್ಪರಗಾ, ನಿಂಬಾಳ ಮತ್ತು ಹಿರೋಳಿ ಮಾರ್ಗವಾಗಿ ತಾಲೂಕಿನೊಳಗೆ ಬರುತ್ತಿರುವುದು ಹಾಗೂ ಈಗಾಗಲೇ ಈಚೆಗೆ ಬಂದಿರುವುದು ಇಲ್ಲಿನವರಿಗೆ ಆತಂಕ ಮೂಡಿಸತೊಡಗಿದೆ.
ಮೂಲಗಳ ಅಂದಾಜಿನಂತೆ ಸೋಮವಾರ ಹಾಗೂ ಮಂಗಳವಾರ ಮಧ್ಯದ ಅವಧಿಯಲ್ಲಿ ಖಜೂರಿ ಬಾರ್ಡ್‌ರನಲ್ಲಿ ಸುಮಾರು ೬೯೭ ಜನರು ಆಗಮಿಸಿದ್ದಾರೆ. ಅವರೆಯಲ್ಲರಿಗೂ ಕೈಗೆ ಸೀಲು ಹಾಕಿ ಹೋಂ ಕ್ವಾರೆಂಟೈನ್‌ನಲ್ಲಿ ಉಳಿಯುವಂತೆ ನೋಡಿಕೊಳ್ಳಲಾಗಿದೆ.

ಈ ನುಡುವೆ ಪೊಲೀಸರು ತಡೆದರು ಸಹಿತ ಅನ್ಯ ಮಾರ್ಗದ ಮೂಲಕ ಅನೇಕರು ಪ್ರವೇಶಿಸಿದ್ದಾರೆ ಎಂಬುದು ಆತಂಕಕ್ಕೆ ಎಡೆಮಾಡುತ್ತಿದೆ. ಬಂದವರನ್ನು ಗಡಿಯಲ್ಲೆ ೧೪ ದಿನಗಳ ಕಾಲ ತಡೆದು ಅವರನ್ನು ಮೂಲಸೌಲಭ್ಯ ದೊಂದಿಗೆ ಪ್ರತ್ಯೇಕವಾಗಿರಿಸಿ ನಂತರ ಸೋಂಕಿನ ಲಕ್ಷಣ ಕಾಣದೆ ಹೋದಲ್ಲಿ ಅವರನ್ನು ಬಿಡುಗಡೆ ಮಾಡುವಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಡಳಿತ ಮುಂದಾಗಬೇಕಾಗಿದೆ.

ಮಾರ್ಚ್ ೧೫ರಿಂದ ಇದುವರೆಗೂ ತಾಲೂಕಿನಲ್ಲಿ ಮಹಾರಾಷ್ಟ್ರ, ಆಂಧ್ರ ತೆಲಾಂಗಣ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಸುಮಾರು ೧೦೩೨೪ ಜನರು ಬಂದಿದ್ದಾರೆ. ಈ ಪೈಕಿ ವಿದೇಶದಿಂದ ಬಂದ ೧೨೫ ಜನರಿಗೆ ಮಾತ್ರ ಹೋಂ ಕ್ವಾರೆಂಟೈನ್ಲ್ಲಿಡಲಾಗಿತ್ತು. ಈ ಪೈಕಿ ಈಗಾಗಲೇ ೧೦೨ ಜನರಿಗೆ ೧೪ ದಿನಗಳ ನಿಗಾವಹಿಸಿ ಬಿಡುಗಡೆ ಮಾಡಲಾಗಿದೆ. ಇನ್ನೂ ೨೩ ಜನರ ಮೇಲೆ ನಿಗಾವಹಿಸಲಾಗುತ್ತಿದೆ.

ಇಲ್ಲಿಗೆ ಸುಮಾರು ೫೦ ಕಿ.ಮೀ ಅಂತರದ ಮಹಾರಾಷ್ಟ್ರದ ಆವುಸಾ ತಾಲೂಕಿನ ತ್ರೋಟಕಿಣ್ಣಿ ಗ್ರಾಮದ ಟ್ಯಾಕ್ಸಿಚಾಲಕನೊಬ್ಬ ತನ್ನ ಟ್ಯಾಕ್ಸಿಯಲ್ಲಿ ಸೋಂಕಿತ ವ್ಯಕ್ತಿಯನ್ನು ದೆಹಲಿಗೆ ಬಿಟ್ಟು ಬಂದಿದ್ದಾನೆ. ದೆಹಲಿಯಲ್ಲಿ ಸೋಂಕಿತ ವ್ಯಕ್ತಿಯನ್ನೇ ಪತ್ತೆ ಮಾಡಿದ ಬಳಿಕ ವಿವರಣೆ ಕೇಳದ ಮೇಲೆ ತ್ರೋಟ್‌ಕಿಣ್ಣಿ ಗ್ರಾಮದ ಚಾಲಕನ ಹೆಸರು ಹೇಳಿದ್ದಾನೆ. ಆಗ ಮಹಾರಾಷ್ಟ್ರದ ಆಡಳಿತವು ಈ ಚಾಲಕನಿಗೆ ಹೊಲದಲ್ಲಿ ಹುಡಕಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಸೋಂಕು ಪತ್ತೆಯಾಗಿದೆ. ಈ ರೀತಿ ಗಡಿನಾಡಿನಲ್ಲಿ ಸೋಂಕಿತರು ಓಡಾಟ ಹೆಚ್ಚಾಗಿದ್ದು ಮುಂಜಾಗೃತ ಕ್ರಮವಾಗಿ ಎಚ್ಚರ ವಹಿಸಿದೆ ಹೋದಲ್ಲಿ ಅನಾಹುತ ತಳಿಹಾಕಲಾಗದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here