ಬಯೋಮೆಟ್ರಿಕ್ ಇಲ್ಲದೆ ರೇಷನ : ತಹಸೀಲ್ದಾರ ಬಸವರಾಜ ಬೇಣ್ಣೆಶಿರೂರ

0
183
  • ಶಪೀಕ್ ಊಡಗಿ

ಸೇಡಂ : ರಾಜ್ಯಾದ್ಯಂತ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯವನ್ನು ಕಾಪಾಡುವ ಹಿತದೃಷ್ಟಿಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ಬಯೋಮೆಟ್ರಿಕ್ ನೀಡಿ, ಪಡಿತರ ಪಡೆಯುವ ಬದಲು ಪರ್ಯಾಯವಾಗಿ ಆಧಾರ್ ಆಧಾರಿತ ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಣೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಹಸೀಲ್ದಾರರು ಬಸವರಾಜ ಬೇಣ್ಣೆಶಿರೂರ ತಿಳಿಸಿದ್ದರು.

ಈಗ ಎರಡು ತಿಂಗಳ ಪಡಿತರ ಒಟ್ಟಿಗೆ ಪಡೆಯತ್ತಿದ್ದು ಒಟಿಪಿ ಸಂಖ್ಯೆಯನ್ನು ಕಡ್ಡಾಯಗೊಳಿಸಿದೇ, ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿಕೊಂಡು ಪಡಿತರ ವಿತರಿಸಿತು, ಪಡಿತರ ವಿತರಣೆಯಲ್ಲಿ ಜನಸಂದಣಿ ತಪ್ಪಿಸಲು , ಪ್ರತಿ ಅಂಗಡಿಯಲ್ಲಿ, ದಿನದಲ್ಲಿ ನಿಗಧಿತ ಸಂಖ್ಯೆಯ ಪಡಿತರದಾರರಿಗೆ ಮಾತ್ರ ಅಂಗಡಿಗೆ ಬರುವಂತೆ ಮಾಹಿತಿ ನೀಡಿ, ಕನಿಷ್ಠ ಒಂದು ಮೀಟರ್ ಸಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಿತರಿಸುವಂತೆ ಸೂಚಿಸಿದ್ದಾರೆ ಎಂದು ಅವರು ಹೇಳಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here