ಕಲಬುರಗಿ: ರಾಜ್ಯದಾದ್ಯಂತ ಕೊರೋನಾ ಸೊಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆಸ್ಪತ್ರೆಗಳಲ್ಲಿನ ಇನ್‍ಸೆಂಟಿವ್ ವಾರ್ಡ್ ಮತ್ತು ಐಸೋಲೇಷನ್ ವಾರ್ಡ್‍ಗಳಲ್ಲಿ 24 ಗಂಟೆಗಳ ಕಾಲ ಕೊರೋನಾ ಶಂಕಿತ ಮತ್ತು ಸೋಂಕಿತರನ್ನು ಚಿಕಿತ್ಸೆಗಾಗಿ ವೈದ್ಯರು/ ತಜ್ಞರು, ಶೂಶ್ರುಷಕರು, ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಗ್ರೂಪ್-ಡಿ ಹುದ್ದೆಗಳನ್ನು ಗುತ್ತಿಗೆ/ ಹೊರಗುತ್ತಿಗೆ ಆಧಾರಿತ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ವೈದ್ಯರು/ ತಜ್ಞರು-10, ಶೂಶ್ರುಷಕರು-20, ಪ್ರಯೋಗ ಶಾಲಾ ತಂತ್ರಜ್ಞರು-5 ಹಾಗೂ ಗ್ರೂಪ್ ‘ಡಿ’ ಸಿಬ್ಬಂದಿ-10 ಸೇರಿದಂತೆ ಒಟ್ಟು 45 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಪ್ರತಿ ಮಾಹೆಯಾನ ವೈದ್ಯರು/ ತಜ್ಞರಿಗೆ 60000 ರೂ., ಶೂಶ್ರುಷಕರಿಗೆ-20000 ರೂ., ಪ್ರಯೋಗ ಶಾಲಾ ತಂತ್ರಜ್ಞರಿಗೆ-15000 ರೂ. ಹಾಗೂ ಗ್ರೂಪ್ ‘ಡಿ’ ಸಿಬ್ಬಂದಿಗೆ 12000 ರೂ. ಸಂಭಾವನೆ ನೀಡಲಾಗುವುದು.
ವಿಶ್ವವ್ಯಾಪಿ ಸಾಂಕ್ರಾಮಿಕವಾಗಿ ಹಬ್ಬಿರುವ ಕೊರೋನಾ ನಿಗ್ರಹಕ್ಕೆ ಆರೋಗ್ಯ ತುರ್ತು ಪರಿಸ್ಥಿಯಲ್ಲಿ ಸೇವೆ ಸಲ್ಲಿಸಲು ಸರ್ಕಾರವು ಆರೋಗ್ಯ ಸಿಬ್ಬಂದಿಗೆ ಅವಕಾಶ ನೀಡಿದ್ದು, ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಕಲಬುರಗಿ ಇವರಿಗೆ ದೂ.ಸಂ.9449843053, 08472-278619 ಅಥವಾ ಇಮೇಲ್ ವಿಳಾಸ: dhogulbarga@gmail.com ಗೆ ಸಂಪರ್ಕಿಸುವಂತೆ ಕೋರಲಾಗಿದೆ.