ಪಡಿತರದಾರರ ಮನೆಗೆ ಬರಲಿದೆ ರೇಷನ್

0
143

ಶಹಾಬಾದ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪಡಿತರ ಚೀಟಿದಾರರ ಮನೆಗೆ ರೇಷನ್ ಅಂಗಡಿಯವರೇ ಬಂದು ಆಹಾರ ಧಾನ್ಯಗಳನ್ನು ನೀಡುವ ವ್ಯವಸ್ಥೆ ಮಾಡಿದ್ದು, ಯಾರು ರೇಷನ್ ಅಂಗಡಿಗೆ ಬರಬಾರದೆಂದು ತಹಸೀಲ್ದಾರ ಸುರೇಶ ವರ್ಮಾ ಮನವಿ ಮಾಡಿದ್ದಾರೆ.

ರೇಷನ್ ಅಂಗಡಿಗೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ.ರೇಷನ್‌ಗಾಗಿ ದುಂಬಾಲು ಬೀಳುವುದನ್ನು ತಡೆಯಲು ಪಡಿತರ ಚೀಟಿದಾರರ ಮನೆಗೆ ರೇಷನ್ ತಲುಪಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದೆವೆ.ಯಾರೂ ರೇಷನ್ ಅಂಗಡಿಗೆ ಬರಬಾರದದೆಂದು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಜಿಲ್ಲಾಢಳಿತದ ಆದೇಶದಂತೆ ತಾಲೂಕಿನಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊರೊನಾ ಜಾಗೃತಿ ಅಥವಾ ಕ್ವಾರಂಟೈಮ್‌ನಲ್ಲಿರುವ ವ್ಯಕ್ತಿಯ ಆರೋಗ್ಯದ ಕುರಿತು ತಿಳಿಯಲು ಬಂದರೆ ಅವರ ಕುಟುಂಬದವರು ಸಹಕಾರ ನೀಡಬೇಕು.ಅಲ್ಲದೇ ಅವರ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು.ಅದನ್ನು ಬಿಟ್ಟಿ ಸಿಬ್ಬಂದಿಗಳ ಜತೆ ತಕರಾರು, ಅಡೆತಡೆ ಮಾಡುವುದು, ಸುಳ್ಳು ಮಾಹಿತಿ ನೀಡಿದರೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here