ಶಹಾಬಾದ: ನಗರದಲ್ಲಿ ಬುಧವಾರ ನಡೆಯಬೇಕಿದ್ದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ತಾಲೂಕಾಢಳಿತದ ಆದೇಶದ ಮೇರೆಗೆ ರದ್ದುಗೊಳಿಸಿದ್ದರಿಂದ ದೇವಸ್ಥಾನ ಸಂಪೂರ್ಣ ಖಾಲಿಖಾಲಿಯಾಗಿತ್ತು.
ಕರೋನಾ ವೈರಸ್ ಹರಡುತ್ತಿರುವುದರಿಂದ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಢಳಿತದ ಆದೇಶದ ಮೇರೆಗೆ ತಾಲೂಕಾಢಳಿತ ಜಾತ್ರೆ ರದ್ದು ಪಡಿಸುವಂತೆ ಆದೇಶ ನೀಡಲಾಗಿತ್ತು. ಆ ಆದೇಶದ ಮೇರೆಗೆ ದೇವಸ್ಥಾನ ಕಮಿಟಿಯವರು ಜಾತ್ರೆಯನ್ನು ರದ್ದುಗೊಳಿಸಿದ್ದಾರೆ. ಇದರಿಂದ ದೇವಸ್ಥಾನ ಜನರಿಲ್ಲದೇ ಭಣಭಣ ಗುಡುಗುತ್ತಿತ್ತು. ಕೇವಲ ರಥೋತ್ಸವದ ದಿನವಾದ ಇಂದು ರಥಕ್ಕೆ ಪೂಜೆ ಸಲ್ಲಿಸುವದಕ್ಕೆ ಮಾತ್ರ ಸಿಮಿತಗೊಳಿಸಲಾಯಿತು.
ವಿಶೇಷ ಪೂಜೆ, ನಂತರ ನಾಲ್ಕಾರು ಜನರು ಮಾತ್ರ ರಥದ ಮನೆಯಿಂದ ರಥವನ್ನು ಹೊರಗೆ ತಂದು ಪೂಜೆ ಸಲ್ಲಿಸುವದರೊಂದಿಗೆ ಮುಕ್ತಾಯಗೊಳಿಸಲಾಯಿತು.
ದೇವಸ್ಥಾನದ ಮಹಾದ್ವಾರಕ್ಕೆ ಬೀಗ ಹಾಕಿ ದೇವಸ್ಥಾನಕ್ಕೆ ಯಾರು ಬರದಂತೆ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.