ನೆನೆಯೋಣ ನಾವು ಕಲ್ಯಾಣ ನಾಡಿನ ವೈರಾಗ್ಯ ನಿಧಿಯನ್ನು : ಇ- ಮೀಡಿಯಾ ಲೈನ್ ಕವಿತೆ

0
159
ನೆನೆಯೋಣ ನಾವು ಕಲ್ಯಾಣ ನಾಡಿನ ವೈರಾಗ್ಯ ನಿಧಿಯನ್ನು..
ನೆನೆಯೋಣ ನಾವು ಕಲ್ಯಾಣ ನಾಡಿನ ವೈರಾಗ್ಯ ನಿಧಿಯನ್ನು
ಮಹಾದೇವಿ ಅಕ್ಕಎಂಬ ಮೇರುಗಿರಿಯ ಬಾಳಿನ ವಿಧಿಯನ್ನು  (ಪಲ್ಲವಿ)..
 
ಹೆಣ್ಣೆಂದು ಕಂಗೆಡದೆ, ಉಡುತಡಿಯ ಕುವರಿ
ಅರಸೊತ್ತಿಗೆ ಧಿಕ್ಕರಿಸಿ..
ಶ್ರೀಶೈಲ ಮಲ್ಲಿಕಾರ್ಜುನ ದೇವನು ಒಲಿಯಲಿ      
ಎಂದು ಹಂಬಲಿಸಿ…….
ನೆನೆಯೋಣ ನಾವು….
 
ಉಸಿರು ಉಸಿರಲಿ ಚೆನ್ನನ ನೆನೆಯುತ   
ನಡೆಯುತಡವಿಯಲಿ ಮಾಮರ,ಕೋಗಿಲೆ,ಶುಕ,ಬೆಳದಿಂಗಳಿಗೆ ಗಮ್ಯಸ್ಥಾನವ ಕೇಳುತಲಿ…..
ನೆನೆಯೋಣ ನಾವು……..
 
ಅಲ್ಲಮ,ಬಸವ,ಕಿನ್ನರಯ್ಯರಿಗೆ ಒಲುಮೆಯಅಕ್ಕಳಾಗಿ
ಸಿರಿ ಕಲ್ಯಾಣ ನಾಡಿನ ಶರಣರಿಗೆಲ್ಲ ಮಹಾ 
ಶರಣೆಯಾಗಿ……..ನೆನೆಯೋಣ ನಾವು……
 
ಗುರಿಯನು ಸಾಧಿಸಿ, ಪಾವನಳಾಗಲು 
ಕಾಯವ ಕಂಗೆಡಿಸಿ, ಚೆನ್ನಮಲ್ಲಿಕಾರ್ಜುನನ ಸೇರಲು ನಡೆದಳು
ಶ್ರೀಶೈಲವನ್ನರಸಿ….. ನೆನೆಯೋಣ ನಾವು……
 
ಹೆಪ್ಪಿಟ್ಟ ಹಾಲು ಭಕ್ತಿಯ ಬಲದಿ ಗಟ್ಟಿ ಘೃತವಾಗಿ ಕದಳಿಯ ಬನದಲಿ ಮಹಾದೇವಿಯಕ್ಕ
ಬಯಲು ಬಯಲಾಗಿ
ನೆನೆಯೋಣ ನಾವು……
 
ಮಂದರಗಿರಿಯ ಬೆಳಕಿನ ತವನಿಧಿ ಜಗದ
ಕಾಂತಿಯಾಗಿ
ಮರ್ತ್ಯಲೋಕದ ಭಕ್ತರ ಮನೆಯ ಸ್ವಾಭಿಮಾನದ ಮಗಳಾಗಿ….
ನೆನೆಯೋಣ ನಾವು
 
ಕನ್ನಡಸಾಹಿತ್ಯ ಕ್ಷೇತ್ರದ ಮೊದಲ ಕವಯತ್ರಿಯಾಗಿ
ಮಹಿಳಾ ಲೋಕದ ಧೀಮಂತಶಕ್ತಿ, ಮರೆಯದ ಮಾಣಿಕ್ಯವಾಗಿ……
ನೆನೆಯೋಣ ನಾವು
 
ಡಾ.ಗೀತಾ ಪಾಟೀಲ (ಗೀತ್)..
( ಘೃತ: ತುಪ್ಪ, ವಿಧಿ: ಪೂರ್ವ ನಿರ್ಧರಿತ ಪಥ,
ತವನಿಧಿ: ಎಂದೆಂದಿಗೂ ಕಡಿಮೆಯಾಗದ ಸಂಪತ್ತು, ಗಮ್ಯಸ್ಥಾನ:
ಉದ್ದಿಷ್ಟ ಸ್ಥಳ,ಹೋಗಿ ಸೇರಬೇಕಾದ ಸ್ಥಳ,ತಲಪುದಾಣ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here