ಆಶಾ ಕಾರ್ಯಕರ್ತೆಯರಿಗೆ ಬಡಾವಣೆಗಳಲ್ಲಿ ಸಹಕರಿಸಿ: ಡಾ ಅಜಗರ್ ಚುಲಬುಲ್

0
29

ಕಲಬುರಗಿ: ಇಂದು ಶಬೆ ಏ ಬಾರತ್ ಇದ್ದು, ಮುಸ್ಲಿಂ ಬಾಂಧವರೆಲ್ಲರು ಮನೆಯಲ್ಲಿ ನಮಾಜ್ ಮಾಡಬೇಕೆಂದು ಮನವಿ ಮಾಡಿ, ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ, ಅಲ್ಲದೇ ಇಬ್ಬರು ವೈರಸ್ ದಿಂದ ಮೃತಪಟ್ಟಿದ್ದಾರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ಸಹಕರಿ ಬಡಾವಣೆಗಳಲ್ಲಿ ಆಶಾ ಕಾರ್ಯಕರ್ತೆಯರು ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಮಾಹಿತಿ ಸಂಗ್ರಹ ಮಾಡುವ ಸಿಬ್ಬಂದಿಗಳೊಂದಿಗೆ ಬಡಾವಣೆಯ ನಿವಾಸಿಗಳು ಮತ್ತು ಮುಖಂಡರು ಮಾಹಿತಿ ನೀಡಬೇಕೆಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಅಜಗರ್ ಚುಲಬುಲ್  ಮನವಿ ಮಾಡಿದ್ದಾರೆ.

ಇಂದು ನಗರದ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಶ್ ಇಲಾಖೆಯಿಮದ ನಡೆದ ಶಾಂತಿ ಸಭೆಯಲ್ಲಿ ಸಭೆಯಲ್ಲಿ ಭಾಗವಹಿಸಿದ ಅವರು ಕೊರೋನಾ ಪೀಡಿತ ಪ್ರದೇಶಗಳಲ್ಲಿ ಜನರು ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆರೊಂದಿಗೆ ಗೊಂದಲಕ್ಕೆ ಒಳಗಾಗಿ ಗದ್ದಲ್ಲ ನಡೆಸುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಆತಂಕ ಮುಡುತಿದ್ದು, ಕೊರೋನಾ ತಡೆಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವತಿಯಿಂದ ನಿಯೋಜಿಸಿದ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಬಂದು ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಈ ಮಾಹಿತಿ ಆಧಾರದಲ್ಲಿ ಜನರಿಗೆ ಆರೋಗ್ಯ ರಕ್ಷಣೆ ಮತ್ತು ಕೊರೋನಾ ತಡೆಗೆ ಸಹಕಾರಿಯಾಗಲಿದ್ದು, ಸಾರ್ವಜನಿಕರು ಸಿಬ್ಬಂದಿಗಳನ್ನು ಸಹಕರಿಸಿ ಸ್ಪಷ್ಟ ಮಾಹಿತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಅಲ್ಲದೇ ಆಯಾ ಬಡಾವಣೆ ಮುಖಂಡರು ಲಾಕ್ ಡೌನ್ ನಿಯಮವನ್ನು ಪಾಲಿಸುವ ಮೂಲಕ ಬಡಾವಣೆಗಳಲ್ಲಿ ಸ್ವಯಂ ಪ್ರೇರಿತವಾಗಿ ಧ್ವನಿ ವರ್ಧಕ ಮೂಲಕ ಜನರಿಗೆ ಜಾಗೃತಿ ಮೂಡಿಸಿ, ಮನೆಯಿಂದ ಹೊರಗಡೆ ಬರದಿರಲು ತಾಕೀತು ಮಾಡಬೇಕೆಂದು ಕರೆ ನೀಡಿದರು.

ಎಸಿಪಿ ಗಿರೀಶ್, ಎಂಬಿ ನಗರ ಸಿಪಿಐ ಶಿವಾನಂದ ವಾಲಿಕಾರ, ಚೌಕ್ ಪೊಲೀಸ್ ಠಾಣೆಯ ಸಿಪಿಐ ಶಕೀಲ್ ಅಂಗಡಿ ಅವರ ನೇತೃತ್ವದಲ್ಲಿ ಶಾಂತಿ ಸಭೆ ಜರುಗಿತ್ತು.

ಈ ವೇಳೆಯಲ್ಲಿ ಅಬ್ದುಲ್ ರಹಿಮ್ ಮಿರ್ಚಿ, ಹಬೀಬ್ ಖಾನ್, ಖದೀರ್ , ಜಹೀರ್ ಖಾನ್, ಇಸ್ಮಾಯಿಲ್ ಕಾರಿಗರ, ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here