ಕಲಬುರಗಿ: ಅಸಂಘಟಿತ ಅಲೆಮಾರಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹಾರಿಸಬೇಕೆಂದು ಇಂದು ಎ.ಐ.ಯು.ಟಿ.ಯು.ಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ಎಂ ಶರ್ಮಾ ಮನವಿ ಪತ್ರ ನೀಡಿ ಮಾತನಾಡಿದ ಅವರು ಕೊರೋನಾ ವೈರಸ್ ನಿಂದ ಭಾರತ್ ಲಾಕ್ ಡೌನ್ ನಿಂದ ಕಾರ್ಮಿಕರು ಆಹಾರ ಮತ್ತು ದಿನನಿತ್ಯದ ಖರ್ಚಿಗಾಗಿ ಪರದಾಡುತ್ತಿದ್ದಾರೆ. ಅಲ್ಲದೇ ಜೀವನ ನಿರ್ವಹಣೆ ಕಷ್ಠವಾಗುತ್ತಿದೆ. ಸರಕಾರವು ಕೆಲವು ಕಡೆ ಕಾರ್ಮಿಕರಿಗೆ ಪರಿಹಾರದ ರೂಪದಲ್ಲಿ ದಿನಸಿ ಸಾಮಾನುಗಳು, ಆಹಾರದ ಪಾಕೆಟಗಳು ವಿತರಿಸುತ್ತಿದ್ದು, ಬಹಳಷ್ಷು ಗ್ರಾಮೀಣ, ನಗರ, ಸ್ಲಂ ಬಡಾವಣೆಗಳಲ್ಲಿ ಬಡಕೂಲಿಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ತಲುಪುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಬಿ.ಪಿ.ಎಲ್. ಕಾರ್ಡು ಇಲ್ಲದವರಿಗೂ ಸಹ ಎಲ್ಲಾ ರೀತಿಯ ಆಹಾರ ಸಾಮಾಗ್ರಿಗಳನ್ನು ಒದಗಿಸಬೇಕು. ತಾಲ್ಲೂಕುಗಳಲ್ಲಿ ಬಡ ಕಾರ್ಮಿಕರಿಗೆ ಶೀಘ್ರ ಆಹಾರ ಸಾಮಾಗ್ರಿ ಪೂರೈಸಿ, ನಗರ ಮತ್ತು ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಿವ ನಿಟ್ಟಿನಲ್ಲಿ ಕ್ರಮ ಕೈಗೊಳಬೇಕು, ರೇಷನ್ ತೆಗೆದುಕೊಳ್ಳುವಲ್ಲಿನ ಅನಾವಶ್ಯಕ ತೊಂದರೆಗಳನ್ನು ತಡೆಗಟ್ಟಬೇಕೆಂದು ಸಂಘದ ಜಿಲ್ಲಾ ಉಪಾಧ್ಯಾಕ್ಷರಾದ ರಾಘವೇಂದ್ರ ಎಂ.ಜಿ. ಮನವಿ ಮಾಡಿದರು.