ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ

0
44

ಕಲಬುರಗಿ: ಕೋವಿಡ್-೧೯ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಗರದ ಗೋದುತಾಯಿ ಕಾಲೋನಿಯಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯವರು ೧ ಲಕ್ಷ ರೂಪಾಯಿ ಚೆಕನ್ನು ಜಿಲ್ಲಾಧಿಕಾರಿ ಬಿ. ಶರತ್ ಅವರಿಗೆ ನೀಡಲಾಯಿತು.

ಶಾಲೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ, ಉಪಾಧ್ಯಕ್ಷ ಹಾಗೂ ಅಫಜಲಪೂರ ಶಾಸಕ ಎಂ. ವೈ. ಪಾಟೀಲ್, ಕಾರ್ಯದರ್ಶಿ ಶಿವಪುತ್ರಪ್ಪಾ ಡೆಂಕಿ ಹಾಗೂ ಪ್ರಾಂಶುಪಾಲ ನಾಗೇಂದ್ರ ಬಡಿಗೇರ ಅವರು ಪ್ರಧಾನ ಮಂತ್ರಿಗಳ ಕರೆಯ ಮೇರೆಗೆ ಸರ್ವರು ಏಪ್ರಿಲ್ ೧೪ ರ ವರೆಗೆ ಮನೆಯಲ್ಲಿಯೇ ಇರುವ ಮೂಲಕ ಕರೋನಾ ತಡೆಗೆ ಸಹಕರಿಸಬೇಕೆಂದು ವಿನಂತಿಸಿರುತ್ತಾರೆ.

Contact Your\'s Advertisement; 9902492681

ಅಲ್ಲದೇ ದೇಶದ ಎಲ್ಲ ಪ್ರಜೆಗಳು ತಮ್ಮ ಮನೆಯಲ್ಲಿಯೇ ಅವರವರ ಧರ್ಮದ ಆಚರಣೆಯಂತೆ ಭಗವಂತನಲ್ಲಿ ಈ ಕಷ್ಟ ಕಾಲದಿಂದ ಪಾರುಮಾಡಲು ಪ್ರಾರ್ಥಿಸಲು ವಿನಂತಿ ಮಾಡಿಕೊಂಡಿರುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here