ಕಲಬುರಗಿಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ಜಿಲ್ಲಾದ್ಯಂತ ಆಹಾರ ಪದಾರ್ಥ ವಿತರಣೆ

0
75

ಕಲಬುರಗಿ: ಕೊರೋನಾ ಭೀತಿ ವಿಶ್ವದೆಲೆಡೆ ಕಾಡುತ್ತಿದ್ದು, ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಬಡ ಕೂಲಿ ಕಾರ್ಮಿಕರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೆಲವು ಧಾನಿಗಳು ನಿರ್ಗತಿಕರ ನೆರವಿಗೆ ಧಾವಿಸಿದರೆ ಇನ್ನೂ ಕೆಲವೇಡೆ ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗುತ್ತಿದೆ.

ಕೊರೋನಾ ಮಹಾಮಾರಿಯನ್ನು ಎದುರಿಸಲು ಸರ್ವರು ಪಣತೊಟ್ಟಿದ್ದು, ಬಡವರ ನೆರವಾಗಾಗಿ ಕಲಬುರಗಿ ಕಾಂಗ್ರೆಸ್ ಜಿಲ್ಲಾ ಸಮಿತಿಯ ಕಾರ್ಯಕರ್ತರು ಇಂದು ಕ್ಷೇತ್ರವಾರು ಜನರಿಗೆ ನೆರವು ನೀಡುತ್ತಿರುವುದು.

Contact Your\'s Advertisement; 9902492681

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಮಜರ್ ಅಲಂ ಖಾನ್ ಮತ್ತು ಪ್ರೀಯಾಂಕ್ ಖರ್ಗೆ ಅವರ ಟೀಮ್ ವತಿಯಿಂದ ಕಲಬುರ್ಗಿ ಅವರು ಉತ್ತರ ಮತಕ್ಷೇತ್ರದ ವಿವಿಧ ಭಾಗಗಳಲ್ಲಿ ತಮ್ಮ ಸೇವೆಯಲ್ಲಿ ನಿರತರಾಗಿದ್ದಾರೆ. ಸತತ 8 ದಿನಗಳಿಂದ 800 ಕುಟುಂಬಗಳಿಗೆ ಸಹಾಯ ನೀಡುವ ಗುರಿ ಹೊಂದಿದೆ. 8000 ಮಾಸ್ಕ್, ಅಕ್ಕಿ, ತೊಗರಿಬೇಳೆ, ಎಣ್ಣೆ, ತರಕಾರಿ, ಖಾರಾದಪುಡಿ ವಿತರಿಸುತಿದ್ದಾರೆ.

ಅದೇ ರೀತಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಕಮಲಾಪುರದ ವಿವಿಧ ತಾಂಡಾಗಳಲ್ಲಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡರಾದ ರವಿ ಚವ್ಹಾಣ ಅವರು ಮತ್ತು ತಂಡ 150 ಕುಟುಂಬದವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಅಣಕಲ ಮತಕ್ಷೇತ್ರದ ಜಿಲ್ಲಾ ಪಂಚಾಯತ ಸದಸ್ಯ ರಾಜೇಶ ಗುತ್ತೆದಾರ ಮತಕ್ಷೇತ್ರದ ತಾಲೂಕ ಅಧಿಕಾರಿಗೆ 1. 500 kg ಬ್ಲಿಚಿಂಗ್ ಪೌಡರ್ 2. 5000 ಕೈ ತೊಳೆಯುವ ಸೋಪ್ 3. ಸರ್ಕಾರದಿಂದ ಪೂರೈಸುತ್ತಿರುವ ಅಡುಗೆಗೆ ಗ್ಯಾಸ್ ಉಚಿತ ನೀಡಿದ್ದಾರೆ.

ಕಲಬುರಗಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶ್ರೀ ಒಯಾಜ್ ಶೇಕ್ ಅವರು ಅಡುಗೆ ಉಪಯುಕ್ತ ದಿನಸಿ ಮತ್ತು ಹಾಲು ಬ್ರೆಡ್ ತಮ್ಮ ಬಡಾವಣೆಯ ಮನೆ-ಮನೆಗೆ ತೆರಳಿ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here