ಸುರಪುರ: ಇಂದು ಕೊರೊನಾ ವೈರಸ್ ಭೀತಿಯಿಂದ ಜಾರಿಯಾಗಿರುವ ಲಾಕ್‌ಡೌನ್ ಬಡ ಜನರ ಬದುಕಿಗೆ ದೊಡ್ಡ ಹೊಡೆತ ನೀಡಿದೆ.ಜನರು ಜೀವನ ನಡೆಸಲು ಕಷ್ಟವಾಗುತ್ತಿದೆ.ಇದನ್ನು ಅರಿತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಡ ಜನತೆಗೆ ಅಗತ್ಯ ವಸ್ತುಗಳ ನೆರವಿಗೆ ಮುಂದಾಗಿದೆ ಎಂದು ಎಬಿವಿಪಿ ವಿಭಾಗಿಯ ಸಹ ಪ್ರಮುಖ ಉಪೇಂದ್ರ ನಾಯಕ ಸುಬೇದಾರ ಮಾತನಾಡಿದರು.
ನಗರದಲ್ಲಿನ ಬಡ ಜನತೆಯ ಮನೆಗಳಿಗೆ ತೆರಳಿ ಆಹಾರ ಧಾನ್ಯಗಳಾದ ಅಕ್ಕಿ ಬೇಳೆ ಮತ್ತಿತರೆ ಅಗತ್ಯ ವಸ್ತುಗಳ ವಿತರಿಸಿ ಮಾತನಾಡಿ,ಇಂದು ಎಬಿವಿಪಿ ನಿರಂತರವಾಗಿ ಬಡ ಜನರೊಂದಿಗೆ ನಿಂತು ಅವರ ಎಲ್ಲಾ ಅಗತ್ಯತೆಗಳನ್ನು ಪೂರೈಸಲು ಮುಂದಾಗಿದೆ.ಜನತೆ ಕೊರೊನಾ ಬಾರದಂತೆ ಜಾಗೃತೆ ವಹಿಸಿ ಮನೆಯಲ್ಲಿಯೆ ಇದ್ದು ಕೊರೊನಾ ನಿರ್ಮೂಲನೆಗೆ ಮುಂದಾಗಬೇಕು ಮತ್ತು ಲಾಕ್‌ಡೌನ್ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಸುಮಾರು ಇಪ್ಪತ್ತಕ್ಕು ಹೆಚ್ಚು ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಮುಂದೆಯು ಅವಶ್ಯಕವಿರುವ ಡ ಜನರೊಂದಿಗೆ ಪರಿಷತ್ ನಿಲ್ಲಲಿದೆ ಎಂದರು.ಈ ಸಂದರ್ಭದಲ್ಲಿ ನಾಗರಾಜ ಮಕಾಶಿ,ಶಿವಪುತ್ರ ಹುಲಕಲ್,ಕ್ಯಾತಪ್ಪಾ ಮೇದಾ ಸೇರಿದಂತೆ ಅನೇಕರಿದ್ದರು.