ಕೊರೊನಾ ಸೊಂಕಿನಿಂದ ದೂರವಿರಲು ಮನೆಯಲ್ಲಿಯೆ ಇರುವಂತೆ ತಹಸೀಲ್ದಾರ ಕರೆ

0
52

ಸುರಪುರ: ಇಡೀ ಜಗತ್ತನ್ನೆ ತಲ್ಲಣಗೊಳಿಸಿರುವ ಕೊರೊನಾ ಮಹಾಮಾರಿ ನಿತ್ಯವು ಹೆಚ್ಚೆಚ್ಚು ಹರಡುತ್ತಿದೆ.ಇದರ ಸೊಂಕು ತಗುಲಿದ ವ್ಯಕ್ತಿ ತುಂಬಾ ತೊಂದರೆ ಪಡಬೇಕಾಗುತ್ತದೆ ಆದ್ದರಿಂದ ತಾವ್ಯಾರು ಮನೆಯಿಂದ ಹೊರಗೆ ಬರದೆ ಆಗಾಗಾ ಕೈಗಳನ್ನು ತೊಳೆಯುತ್ತಿರುವಂತೆ ತಹಸೀಲ್ದಾರ ನಿಂಗಣ್ಣ ಬಿರಾದಾರ್ ತಿಳಿಸಿದರು.

ತಾಲೂಕಿನ ಹೆಮ್ಮಡಗಿ ಮತ್ತು ಕಚಕನೂರ ಗ್ರಾಮಗಳಲ್ಲಿ ಉಳಿದುಕೊಂಡಿರುವ ಬೈ ಕಂಬಾರ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡಿ,ಹೊರಗಡೆ ಏನಾದರು ತೆಗೆದುಕೊಳ್ಳಲು ಮಕ್ಕಳನ್ನು ಕಳುಹಿಸದೆ ದೊಡ್ಡವರು ಹೋಗಿ,ಅದು ಮುಖಕ್ಕೆ ಮಾಸ್ಕ್ ಧರಿಸಿ ಮತ್ತು ಹೊರಗೆ ಹೋಗಿ ಬಂದ ನಂತರ ನಿಮ್ಮ ಕೈಗಳನ್ನು ಸರಿಯಗಿ ತೊಳೆದುಕೊಳ್ಳುವಂತೆ ತಿಳಿಸಿದರು.

Contact Your\'s Advertisement; 9902492681

ಬಡ ಕಂಬಾರ ಕುಟುಂಬಗಳಿಗೆ ಅಕ್ಕಿ ಬೇಳೆ ಮತ್ತಿತರೆ ವಸ್ತುಗಳನ್ನು ವಿತರಿಸಿ ಜಾಗೃತಿ ಮೂಡಿಸಿದರು.ಕಂದಾಯ ನಿರೀಕ್ಷಕ ಗುರುಬಸಪ್ಪ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here