ಸುರಪುರ: ತಾಲೂಕಿನ ವಿವಿಧ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಅಡಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರನ್ನು ಬೃಂದಾ ಗ್ಯಾಸ್ ಏಜೆನ್ಸಿ ವತಿಯಿಂದ ಅನ್ನಪೂರ್ಣೇಶ್ವರಿ ಪ್ರಶಸ್ತಿ ನೀಡಿ ವಿನೂತನವಾಗಿ ಸನ್ಮಾನಿಸಲಾಯಿತು.
ಬುಧುವಾರದಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಅಡಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರನ್ನು ಬೃಂದಾ ಗ್ಯಾಸ್ ಏಜೆನ್ಸಿ ವತಿಯಿಂದ ಅನ್ನಪೂರ್ಣೇಶ್ವರಿ ಪ್ರಶಸ್ತಿ ನೀಡಿ ವಿನೂತನವಾಗಿ ಸನ್ಮಾನಿಸಲಾಯಿತು.
ಬಿಸಿಯೂಟ ಯೋಜನೆ ಅಡಿ ಉತ್ತಮವಾಗಿ ಕೆಲಸ ನಿರ್ವಹಿಸಿದ ಮಾನಮ್ಮ (ಸ.ಹಿ.ಪ್ರಾ.ಶಾಲೆ ಪೇಠ ಅಮ್ಮಾಪುರ), ರೇಣುಕಾ (ಸ.ಮಾ.ಪ್ರಾ.ಶಾಲೆ ನಾರಾಯಣಪುರ ಕ್ಯಾಂಪ್), ದೇವಮ್ಮ (ಸ.ಹಿ.ಪ್ರಾ.ಶಾಲೆ ಏದಲಬಾವಿ), ರೇಣುಕಾ (ಸ.ಕ.ಹಿ.ಪ್ರಾ.ಶಾಲೆ ತಿಮ್ಮಾಪುರ), ಸುವರ್ಣಾ (ಸ.ಮಾ.ಪ್ರಾ.ಶಾಲೆ ಕೆಂಭಾವಿ), ಮಹೆಬೂಬಿ (ಸ.ಪ್ರೌಢ.ಶಾಲೆ ದೇವಾಪುರ), ಸೋಮಿಬಾಯಿ (ಸ.ಹಿ.ಪ್ರಾ.ಶಾಲೆ ಜುಮಾಲಪುರ ತಾಂಡಾ) ಇವರಿಗೆ ಕಕ್ಕೇರಾದ ಬೃಂದಾ ಗ್ಯಾಸ್ ಏಜೆನ್ಸಿಯ ವತಿಯಿಂದ ಅನ್ನಪೂಣೇಶ್ವರಿ ಪ್ರಶಸ್ತಿ ಹಾಗೂ ೧ಸಾವಿರ ರೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು ಅಲ್ಲದೆ ಇದೇ ಸಂದರ್ಭದಲ್ಲಿ ೨೦೧೯ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಬಿಸಿಯೂಟ ಯೋಜನೆಯ ಅಡುಗೆ ಸಿಬ್ಬಂದಿಯ ೪ ಮಕ್ಕಳಿಗೆ ತಲಾ ೨ಸಾವಿರ ರೂ ಬಹುಮಾನ ನೀಡಲಾಯಿತು.
ತಾ ಪಂ. ಇ.ಓ ಜಗದೇವ ಈ ಸಂದರ್ಭದಲ್ಲಿ ಮಾತನಾಡಿ ತಾಲೂಕಿನಲ್ಲಿ ಬಿಸಿಯೂಟ ಯೋಜನೆ ಯಶಸ್ವಿಯಾಗಿ ನಡೆಯುವಲ್ಲಿ ಅಡುಗೆ ಕಾರ್ಮಿಕರ ಶ್ರಮ ತುಂಬಾ ಅಮೂಲ್ಯವಾದದ್ದು, ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ ಗ್ಯಾಸ್ ಏಜೆನ್ಸಿಯವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು, ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರ, ಸಿ.ಡಿ.ಪಿ.ಓ ಲಾಲಸಾ, ಗ್ಯಾಸ್ ಏಜೆನ್ಸಿಯ ವ್ಯವಸ್ಥಾಪಕರಾದ ಭಾರತಿ, ಇತರರು ಇದ್ದರು.