ಕಲಬುರಗಿ: ವಿಶ್ವ ಗುರು ಬಸವಣ್ಣನವರ 886 ನೇ ಬಸವ ಜಯಂತಿ ಉತ್ಸವ ನಿಮಿತ್ತ, ಜಾಗತಿಕ ಲಿಂಗಾಯತ ಮಹಾಸಭಾ ಬಸವ ಜಯಂತಿ ಉತ್ಸವ ಸಮಿತಿ ಕಲಬುರಗಿ ಹಾಗೂ ಡಾ. ಎಂ.ಎಂ. ಕಲ್ಬುರ್ಗಿ ವಿಚಾರ ವೇದಿಕೆ ಸಹಯೋಗದಲ್ಲಿ ನಗರದ ರಾಜಾಪುರದ ಪಾವನ ಗಂಗಾ ಬಡಾವಣೆಯಲ್ಲಿ ಬಸವ ಜಯಂತಿ ಉತ್ಸವ 19 ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಮರ ಮಹಾಂತಗೋಳ, ಮಹಾಂತೇಶ ಕಲಬುರಗಿ, ಶಶಿಕಾಂತ ಕೆ. ಹಸಗೊಂಡ ತಿಳಿಸಿದ್ದಾರೆ.
ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ಸದಸ್ಯ ಈರಣ್ಣ ಹೊನ್ನಳ್ಳಿ ಉದ್ಘಾಟಿಸಲಿದ್ದು, ಬಸವ ತತ್ವ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಅನುಭಾವ ನೀಡಲಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭಾದ ರವೀಂದ್ರ ಶಾಬಾದಿ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇವೇಳೆಯಲ್ಲಿ ವಚನ ನೃತ್ಯ ಹಾಗೂ ಕಾಯಕ ಶರಣರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.