ಸುರಪುರ: ಕೊರೊನಾ ಸೊಂಕು ನಿರ್ಮೂಲನೆಗಾಗಿ ಸರಕಾರಗಳು ಘೋಷಣೆ ಮಾಡಿರುವ ಲಾಕ್‌ಡೌನ್ ಕಾರಣದಿಂದ ಇಂದು ಅನೇಕ ಬಡ ಕುಟುಂಬಗಳು ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುವ ಮೂಲಕ ಬೀದಿಗೆ ಬಿದ್ದಿವೆ.ಇಂತಹ ಬಡ ಕುಟುಂಬಗಳಿಗೆ ನೆರವಾಗುವುದು ಎಲ್ಲರ ಕರ್ತವ್ಯ ಎಂದು ಭಾವಿಸಿ ನಮ್ಮ ಬೈರಿಮರಡಿ ಗ್ರಾಮದಲ್ಲಿನ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ವೆಂಕಟೇಶ ನಾಯಕ ಮಾತನಾಡಿದರು.
ಬೈರಿಮರಡಿಯಲ್ಲಿನ ಇಪ್ಪತ್ತಕ್ಕೂ ಹೆಚ್ಚಿನ ಬಡ ಕುಟುಂಬಗಳಿಗೆ ಅಕ್ಕಿ ಬೇಳೆ ಅಡುಗೆ ಎಣ್ಣೆ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಕಿಟ್ ವಿತರಿಸಿ ಮಾತನಾಡಿ,ಇಂದು ಜನರ ಕಷ್ಟವನ್ನು ಕಂಡು ಬಡ ನಿರ್ಗತಿಕ ಮತ್ತು ವಲಸಿಗ ಕುಟುಂಬಗಳಿಗೆ ಆಹಾರ ಧಾನ್ಯ ಮತ್ತಿತರೆ ವಸ್ತುಗಳನ್ನು ನಿತ್ಯವು ಅನೇಕ ಸಂಘ ಸಂಸ್ಥೆಗಳು ವಿತರಿಸುವ ಮೂಲಕ ತಮ್ಮ ಕರ್ತವ್ಯ ಮೆರೆಯುತ್ತಿರುವುದು ಶ್ಲಾಘನಿಯ ಸಂಗತಿಯಾಗಿದೆ.ಅದರಂತೆ ಇಂದು ನಾವುಕೂಡ ಬಡವರ ಸೇವೆಯ ಒಂದಿಷ್ಟು ಅಳಿಲು ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ದ್ಯಾವಮ್ಮ ಸವಳಪಟ್ಟಿ,ಗ್ರಾ.ಪಂ ಸದಸ್ಯರಾದ ಮಲ್ಲರಡ್ಡಿ ಬನ್ನೆಟ್ಟಿ ಮುಖಂಡರಾದ ಮಾಳಪ್ಪ ಬನ್ನೆಟ್ಟಿ,ಹೊನ್ನಪ್ಪ ಸವಳಪಟ್ಟಿ,ಅಶೋಕ ನಾಯಕ,ರವಿ.ಡಿ.ನಾಯಕ,ಬಲಭೀಮ ಬೊಮ್ನಳ್ಳಿ,ಬಲಭೀಮ ಬಾದ್ಯಾಪುರ,ಲಚಮಣ್ಣ ಬನ್ನೆಟ್ಟಿ,ದ್ಯಾವಪ್ಪ ಹೆಮ್ಮಡಗಿ,ದೇವಪ್ಪ ಬನ್ನೆಟ್ಟಿ,ಶ್ರೀನಿವಾಸ ವಡ್ಡರ,ನಿಂಗಪ್ಪ ಹುಂಡೇಕಲ್ ಸೇರಿದಂತೆ ಅನೇಕರಿದ್ದರು.