ಪತ್ರಕರ್ತರಿಗೂ 50ಲಕ್ಷದ ವಿಮೆ ಘೋಷಿಸಬೇಕಂದು ನಯಾ ಸವೇರ ಸಂಘಟನೆ ಆಗ್ರಹ

0
64

ಕಲಬುರಗಿ: ಕೇಂದ್ರ ಸರ್ಕಾರ ವೈದ್ಯಕೀಯ ಕ್ಷೇತ್ರ, ಪ್ಯಾರಾಮೆಡಿಕಲ್ ಮತ್ತು ಆಶಾ ಕಾರ್ಯಕರ್ತೆಯರಿಗೆ ಐವತ್ತು ಲಕ್ಷ ರೂ ಗಳ ಜೀವ ವಿಮೆ ಮಾಡಿಸಿದಂತೆ, ಪತ್ರಕರ್ತರಿಗೆ, ಮತ್ತು ಪೋಲೀಸರಿಗೆ 50 ಲಕ್ಷ ರೂಪಾಯಿಗಳ ವಿಮೆ ಮಾಡಿಸಬೇಕೆಂದು ನಯಾ ಸವೇರಾ ಸಂಘಟನೆ ಅಧ್ಯಕ್ಷರಾದ ಮೋದಿನ್ ಪಟೇಲ ಅಣಬಿ ಒತ್ತಾಯಿಸಿದ್ದಾರೆ.

ಕೊರೋನಾ ಸೊಂಕು ಹರಡದಂತೆ ಪತ್ರಕರ್ತರು ಸಾಮಾಜಿಕವಾಗಿ ಜನಜಾಗೃತಿ ಮೂಡಿಸುತ್ತಿದ್ದು. ಪೋಲೀಸರು ಜೀವದ ಹಂಗು ತೊರೆದು,ಅಹೋರಾತ್ರಿ ಶ್ರಮಿಸುತ್ತಿದ್ದು ಈ ಎರಡೂ ಕ್ಷೇತ್ರಗಳನ್ನು ವಿಮೆಗೆ ಒಳಪಡಿಸಬೇಕೆಂದು ಸಂಘಟನೆ ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಅವರು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಸಾರ್ವಜನಿಕರು ಮಹಾಮಾರಿ ಕೊರೋನಾ ವೈರಸ್ ಹರಡದಂತೆ ಜಾಗೃತಿ ವಹಿಸಬೇಕು, ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೇ ಮನೆಯಲ್ಲಿದ್ದು ಸೋಸಿಯಲ್ ಡಿಸ್ಟನ್ಸ್ ಕಾಪಾಡಬೇಕು ಸಂಘಟನೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here